ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಲಘಟಗಿ: ಚುನಾವಣೆ ಜಿದ್ದಾಜಿದ್ದಿ ಲಾಡ್ ಅಕ್ಕಿ ಛಬ್ಬಿ ಕುಕ್ಕರ್

ಕಲಘಟಗಿ: ಚುನಾವಣೆ ಸಮೀಪಿಸುತ್ತಿದ್ದಂತೆ ಕಲಘಟಗಿ ಕ್ಷೇತ್ರದಲ್ಲಿ ರಾಜಕೀಯ ಚಟುವಟಿಕೆಗಳು ಪ್ರಾರಂಭಗೊಂಡಿದೆ. ಕ್ಷೇತ್ರದ ಕಾಂಗ್ರೆಸ್ ಟಿಕೆಟ್‌ಗಾಗಿ ಇಗಾಗಲೆ ಮಾಜಿ ಸಚಿವ ಸಂತೋಷ ಲಾಡ್ ಹಾಗೂ ಮಾಜಿ ವಿಧಾನ ಪರಿಷತ್ ಸದಸ್ಯರಾದ ನಾಗರಾಜ ಛಬ್ಬಿ ಪೈಪೋಟಿ ನಡೆಸಿದ್ದಾರೆ.

ಕೊರೊನಾ ಸಮಯದಲ್ಲಿ ಮಾಜಿ ಸಚಿವ ಸಂತೋಷ ಲಾಡ್ ಕ್ಷೇತ್ರದ ಜನರ ಮನೆ ಮನೆಗೆ ಅಕ್ಕಿ ನೀಡಿ ಕ್ಷೇತ್ರದ ಜನರಿಗೆ ಹತ್ತಿರವಾಗಿದ್ದರು. ಆದರೆ ಅದಕ್ಕೆ ತಿರುಗೇಟು ನಿಡುವಂತೆ ನಾಗರಾಜ್ ಛಬ್ಬಿ ಯವರು ಮನೆ ಮನೆಗೆ ಕುಕ್ಕರ್ ನಿಡುವ ಮೂಲಕ ಕ್ಷೇತ್ರದಲ್ಲಿ ರಾಜಕೀಯ ತಂತ್ರ ರೂಪಿಸುತ್ತಿದ್ದಾರೆ. ಈ ಮೂಲಕ ಮತದಾರರನ್ನು ಸೆಳೆಯಲು ಯತ್ನಿಸುತ್ತಿದ್ದಾರೆ.

ಏನೇ ಆದರೂ ಒಂದೆ ಪಕ್ಷದ ಇಬ್ಬರು ನಾಯಕರು ಈ ರೀತಿ ಟಿಕೆಟ್‌ಗಾಗಿ ಜಿದ್ದಾ ಜಿದ್ದಿ ನಡೆಸಿದ್ದು ಕ್ಷೇತ್ರದ ಕಾಂಗ್ರೆಸ್ ಕಾರ್ಯಕರ್ತರಲ್ಲಿ ಗೊಂದಲ ಸೃಷ್ಟಿಯಾಗಿದೆ. ಇತ್ತ ಕಡೆ ಮತದಾರರು ಛಬ್ಬಿ ಕೊಟ್ಟ ಕುಕ್ಕರ್‌ನಲ್ಲಿ ಲಾಡ್ ಕೊಟ್ಟ ಅನ್ನ ಬೇಯಿಸಿಕೊಳ್ಳುತ್ತಿದ್ದಾರೆ

ವರದಿ: ಉದಯ ಗೌಡರ

Edited By : Manjunath H D
Kshetra Samachara

Kshetra Samachara

02/10/2022 01:15 pm

Cinque Terre

28.8 K

Cinque Terre

19

ಸಂಬಂಧಿತ ಸುದ್ದಿ