ಹುಬ್ಬಳ್ಳಿ: ಕರ್ನಾಟಕವು ಭಾರತ ಹಾಗೂ ಭಾರತ ಮಾತೆಯನ್ನು ಪ್ರೀತಿಸುತ್ತದೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕನಿಷ್ಟ ಕರ್ನಾಟಕದಲ್ಲಿ ಭಾರತ ಮಾತೆಗೆ ಗೌರವ ಕೊಡುವ ಜನರನ್ನು ಭೇಟಿಯಾಗಲಿ. ಪ್ರಥಮ ಬಾರಿಗೆ ಕಾಂಗ್ರೆಸ್ ಪಾರ್ಟಿ ಚಟುವಟಿಕೆ ಮಾಡುತ್ತಿದ್ದಾರೆ. ಇದು ನನಗೆ ಸಂತೋಷ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದ್ದಾರೆ.
ನಗರದಲ್ಲಿಂದು ಮಾಧ್ಯಮದ ಜೊತೆಗೆ ಮಾತನಾಡಿದ ಅವರು, ರಾಹುಲ್ ಗಾಂಧಿ ಅವರ ಚಟುವಟಿಕೆ ಇಷ್ಟು ದಿನ ದೆಹಲಿಗೆ ಮಾತ್ರ ಸೀಮಿತವಾಗಿತ್ತು. ಆದರೆ ಈಗ ಕರ್ನಾಟಕಕ್ಕೆ ಬಂದಿದೆ. ಭಾರತ ತೋಡೋದವರ ಜೊತೆಗೆ ಕೂಡಬೇಡಿ, ಜೋಡೋದವರ ಜೊತೆ ಕೂಡಿ. ಭಾರತ ಜೋಡೋಗೆ ಯಾರದ್ದೂ ತಕರಾರಿಲ್ಲ. ಭಾರತ ಜೋಡೋ ಹೆಸರಿನಲ್ಲಿ ತೋಡೋದವರ ಜೊತೆ ಕೂಡಬೇಡಿ ಎಂದ ವ್ಯಂಗ್ಯವಾಡಿದರು.
ಯಾವತ್ತಿನಿಂದ RSS ಶುರುವಾಗಿದೆಯೋ ಅವತ್ತಿನಿಂದ ಆರ್.ಎಸ್.ಎಸ್ ಟಾರ್ಗೆಟ್ ಮಾಡಲಾಗುತ್ತಿದೆ. ಯಾರೇ ಟಾರ್ಗೆಟ್ ಮಾಡಿದರೂ ತನ್ನ ಧ್ಯೇಯದೊಂದಿಗೆ ಮುಂದೆ ಹೋಗುತ್ತದೆ. RSS ದೇಶದ ಮೌಲ್ಯಗಳು, ದೇಶದ ಹಿತದ ಬಗ್ಗೆ ನಂಬಿಕೆ ಇಟ್ಟ ಸಂಘ ಎಂದು ಹೇಳಿದರು.
ಮಲ್ಲಿಕಾರ್ಜುನ ಖರ್ಗೆ ಹಿರಿಯರು, ವೈಯಕ್ತಿಕವಾಗಿ ನಾನು ಅವರು ಕಳೆದ ಹದಿನೈದು ವರ್ಷಗಳಿಂದ ಪಾರ್ಲಿಮೆಂಟ್‌ನಲ್ಲಿ ಇದ್ದೇವೆ. ಕಾಂಗ್ರೆಸ್ ಫ್ಯಾಮಿಲಿ ರನ್ ಪಾರ್ಟಿ. ಖರ್ಗೆಯವರು ರಿಮೋರ್ಟ್ ಕಂಟ್ರೋಲ್ ಅಧ್ಯಕ್ಷರಾಗಬಾರದು ಅನ್ನೋದ ನನ್ನ ಆಸೆ ಎಂದು ಜೋಶಿ ಲೇವಡಿ ಮಾಡಿದರು.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
01/10/2022 05:05 pm