ಧಾರವಾಡ: ಧಾರವಾಡದ ಹೊಸ ಎಪಿಎಂಸಿ ಪ್ರಾಂಗಣದಲ್ಲಿ ಕೇಂದ್ರ ಸರ್ಕಾರದ ಬೆಂಬಲ ಬೆಲೆಯಡಿ ತೆರೆಯಲಾಗಿರುವ ಹೆಸರು ಹಾಗೂ ಉದ್ದು ಖರೀದಿ ಕೇಂದ್ರಕ್ಕೆ ಶಾಸಕ ಅಮೃತ ದೇಸಾಯಿ ಚಾಲನೆ ನೀಡಿದರು.
ಧಾರವಾಡ ಗ್ರಾಮಾಂತರ ಕ್ಷೇತ್ರದಲ್ಲಿ ಸದ್ಯಕ್ಕೆ ಎರಡು ಖರೀದಿ ಕೇಂದ್ರಗಳನ್ನು ತೆರೆಯಲಾಗಿದೆ. ಹೆಬ್ಬಳ್ಳಿ ಹಾಗೂ ಧಾರವಾಡ ಎಪಿಎಂಸಿ ಪ್ರಾಂಗಣದಲ್ಲಿ ಖರೀದಿ ಕೇಂದ್ರಕ್ಕೆ ಚಾಲನೆ ನೀಡಲಾಗಿದೆ. ಹೆಸರಿಗೆ 7750 ಹಾಗೂ ಉದ್ದಿಗೆ 6600 ರೂಪಾಯಿ ಬೆಂಬಲ ಬೆಲೆ ನೀಡಲಾಗಿದೆ. ತೇವಾಂಶ ಶೇ.1 ರಷ್ಟು ಹೆಚ್ಚಿಗೆ ಇದ್ದರೂ ಧಾನ್ಯ ಖರೀದಿ ಮಾಡುವಂತೆ ಕೇಂದ್ರ ಸರ್ಕಾರಕ್ಕೆ ಪ್ರಹ್ಲಾದ ಜೋಶಿ ಅವರ ಮುಖಾಂತರ ಮನವಿ ಮಾಡುತ್ತೇನೆ ಎಂದು ಶಾಸಕ ಅಮೃತ ದೇಸಾಯಿ ಹೇಳಿದರು.
ರೈತರು ಈ ಖರೀದಿ ಕೇಂದ್ರ ಲಾಭವನ್ನು ಪಡೆದುಕೊಳ್ಳಬೇಕು. ಒಳ್ಳೆಯ ಧಾನ್ಯಗಳನ್ನು ರೈತರು ಶೇಖರಿಸಿಟ್ಟಿದ್ದು, ರೈತರಿಗೆ ಈ ಖರೀದಿ ಕೇಂದ್ರದಿಂದ ಉಪಯೋಗವಾಗಲಿದೆ ಎಂದು ಶಾಸಕರು ತಿಳಿಸಿದರು.
Kshetra Samachara
30/09/2022 03:35 pm