ಕಾಪೋರೇಟರ್ ಗಳಿಲ್ಲಿದೆ ಅನೇಕ ತಿಂಗಳು ಬಿಕೋ ಎನ್ನುತ್ತಿದ್ದ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯಲ್ಲಿ ಈ 82 ಕಾಪೋರೇಟರ್ ವಿರಾಜಮಾನರಾಗಿದ್ದಾರೆ. ಆದರೆ ಮಹಾನಗರದ ಸಮಸ್ಯೆಗಳಿಗೆ ಮುಕ್ತಿ ಸಿಕ್ಕಿಲ್ಲ. ಇಂದು ಕುಡಿವ ನೀರು ಬಂದ್ರೆ ಮತ್ತೊಂದು ವಾರದವರಗೆ ದರ್ಶನವಿಲ್ಲ. ಸ್ಮಾರ್ಟ್ ಸಿಟಿ, ಫ್ಲೈ ಓವರ್ ನೆಪದಲ್ಲಿ ರಸ್ತೆಗಳಂತೂ ಕೆರಗೆಟ್ಟು ಹೋಗಿವೆ. ಗಟಾರು ಚರಂಡಿ ಗಬ್ಬೆದ್ದು ನಾರುತ್ತಿವೆ.
ಕೆಸರು ಗದ್ದೆಯಾದ ರಸ್ತೆಗಳು ನಮ್ಮ ಕಾಪೋರೇಟರ್ ಗಳಿಗೆ ಕಾಣುತ್ತಿಲ್ಲ, ಗಟಾರುಗಳ ಗಬ್ಬು ವಾಸನೆ ಇವರಿಗೆ ಬಡಿಯುತ್ತಿಲ್ಲ. ನೀರಿಗಾಗಿ ಬಾಯಿ ಬಾಯಿ ಬಡಿದುಕೊಂಡರೂ ಜಾಣ ಕಿವುಡರಂತೆ ದಾಟಿ ಹೋಗುತ್ತಿದ್ದಾರೆ.
ತಮ್ಮದೆ ಸರಕಾರವಿರುವುದರಿಂದ ಬಿಜೆಪಿ ಕಾಪೋರೇಟರ್ ಗಳು ಮೂಕ ಪ್ರೇಕ್ಷಕರಾಗಿದ್ದಾರೆ. ಬಿಜೆಪಿಯನ್ನು ಹಣಿಯುವ ಅವಕಾಶವಿದ್ದರೂ ಪ್ರತಿ ಪಕ್ಷ ಕಾಂಗ್ರೆಸ್ ಸದಸ್ಯರೂ ಮಿಲಾಪಿ ಕುಸ್ತಿ ಆಡುತ್ತಿದ್ದಾರೆ.
ಇದರ ಮಧ್ಯ ಕೆಲವು ಕಾಪೋರೇಟರ್ ಗಳು ತಮ್ಮ ವಾರ್ಡಿನ ಸಮಸ್ಯೆ ಬಗೆಹರಿಸಲು ಶ್ರಮಿಸುತ್ತಿದ್ದಾರೆ. ಆದ್ರೆ ಬಹುತೇಕರು ನಾಮಕಾ ವಾಸ್ತೆ ಕಾಪೋರೇಟರ್ ಆಗಿ ಬೀಗುತ್ತಿದ್ದಾರೆ.
ಉತ್ತಮ ಕೆಲಸ ಮಾಡುತ್ತಿರುವವರನ್ನು ಬೆನ್ನು ತಟ್ಟಲು, ಕುಂಭಕರ್ಣ ನಿದ್ರೆಯಲ್ಲಿರುವ ಕಾಪೋರೇಟರ್ ಬೆನ್ನಿಗೆ ಗುದ್ದಲು ನಿಮ್ಮ ಪಬ್ಲಿಕ್ ನೆಕ್ಸ್ಟ್ ಮಾಧ್ಯಮ ನಿಮ್ಮ ವಾರ್ಡಗಳಿಗೆ ತನ್ನ ತಂಡದೊಂದಿಗೆ ಬರುತ್ತಿದೆ.
ಯಾರನ್ನೂ ವೈಯಕ್ತಿಕವಾಗಿ ಟೀಕಿಸುವುದು ನಮ್ಮ ಉದ್ದೇಶವಲ್ಲ. ಚುನಾಯಿತ ಪ್ರತಿನಿಧಿಗಳನ್ನು ಬಡಿದೆಬ್ಬಿಸಿ ಅಭಿವೃದ್ಧಿ ಕಾರ್ಯ ಚುರುಕುಗೊಳಿಸುವಂತೆ ಪ್ರೇರೇಪಿಸುವುದು ಹಾಗೂ ಸರಕಾರದ ಗಮನ ಸೆಳೆಯುವುದು ಈ ನಮ್ಮ ಅಭಿಯಾನದ ಉದ್ದೇಶ.
ಚುನಾವಣೆ ಮುನ್ನ ಗೊಳ್ಳು ಆಶ್ವಾಸನೆಗಳನ್ನು ನೀಡಿದ ಕಾಪೋರೇಟರ್ ಗಳ ಬಣ್ಣ ಬಯಲು ಮಾಡಿ. ಬನ್ನಿ ನಿಮ್ಮ ನಿಮ್ಮ ಸಮಸ್ಯೆ ನಮ್ಮೊಂದಿಗೆ ಹಂಚಿಕೊಳ್ಳಿ. ನಿಮ್ಮ ವಾರ್ಡಿಗೆ ಭೇಟಿ ನೀಡಬೇಕೆ ಹಾಗಾದರೆ ನಮ್ಮ ಸಹಾಯವಾಣಿ ಸಂಪರ್ಕಿಸಿ ನಿಮ್ಮ ಸಂಪೂರ್ಣ ವಿವರ ನೀಡಿ.
ಪಬ್ಲಿಕ್ ನೆಕ್ಸ್ಟ್ ಸಹಾಯವಾಣಿ : 86183 49145
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
21/09/2022 11:29 am