ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಎಲ್ಲ ಕುರುಬ ಜನಾಂಗಕ್ಕೂ ಎಸ್.ಟಿ ಮೀಸಲಾತಿ ನೀಡಿ: ಮುತ್ತಣ್ಣವರ ಒತ್ತಾಯ

ಹುಬ್ಬಳ್ಳಿ: ಬೆಟ್ಟ ಕುರುಬ ಸಮುದಾಯವನ್ನು ಎಸ್.ಟಿ ಜಾತಿ ಪಟ್ಟಿಗೆ ಸೇರಿಸಿದ್ದು, ಸ್ವಾಗತಾರ್ಹವಾಗಿದೆ. ಅದೇ ಎಸ್‌ಟಿ ಪಟ್ಟಿಗೆ ಎಲ್ಲ ಕುರುಬರನ್ನು ಸೇರಿಸಬೇಕೆಂದು ಎಸ್.ಟಿ ಹೋರಾಟ ರಾಜ್ಯ ಸಮಿತಿಯ ಕಾರ್ಯದರ್ಶಿ ಶಿವಾನಂದ ಮುತ್ತಣ್ಣವರ ಹೇಳಿದರು.

ಕರ್ನಾಟಕದ ಬೆಟ್ಟ ಕುರುಬ ಜಾತಿ ಸೇರಿದಂತೆ ಐದು ರಾಜ್ಯಗಳ ವಿವಿಧ ಜಾತಿಗಳನ್ನು ಎಸ್‌ಟಿಗೆ ಸೇರಿಸಲು ಪ್ರಧಾನಮಂತ್ರಿ ನರೇಂದ್ರ ಮೋದಿ, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹಾಗೂ ಕೇಂದ್ರಕ್ಕೆ ಶಿಫಾರಸ್ಸು ಮಾಡಿದ ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯನವರಿಗೆ ಅಭಿನಂದನೆ ಸಲ್ಲಿಸುವುದಾಗಿ ಅವರು ಹೇಳಿದರು.

ಕರ್ನಾಟಕ ರಾಜ್ಯದ ಕುರುಬರ ಪೀಠಾಧ್ಯಕ್ಷರಾದ ಕಾಗಿನೆಲೆ ಶ್ರೀ ನಿರಂಜನಾನಂದಪುರಿ ಮಹಾಸ್ವಾಮಿಗಳ ನೇತೃತ್ವದಲ್ಲಿ ಬೃಹತ್ ಪ್ರಮಾಣದಲ್ಲಿ ರಾಜ್ಯಾದ್ಯಂತ ಲಕ್ಷಾಂತರ ಜನರ ಸಮ್ಮುಖದಲ್ಲಿ ಕುರಬನಿಗೆ ಎಸ್.ಟಿ.ಮೀಸಲಾತಿ ಸಿಗಬೇಕೆಂಬ ಆಗ್ರಹವಾಗಿದೆ. ಕರ್ನಾಟಕದಲ್ಲಿ ಕುರುಬರಿಗೆ ಎಸ್.ಟಿ ಮೀಸಲಾತಿ ದೊರಕಲು ಕುಲಶಾಸ್ತ್ರ ಅಧ್ಯಯನಕ್ಕೆ ಸಮಿತಿ ರಚನೆ ಮಾಡಿ ರಾಜ್ಯಾದ್ಯಂತ ಪ್ರವಾಸ ಮಾಡಿದ ಸಮಿತಿಯು ಮುಖ್ಯಮಂತ್ರಿಗಳಿಗೆ ಒಪ್ಪಿಸಿದ್ದಾಗಿದೆ. ಮುಖ್ಯಮಂತ್ರಿ ಮಯವರು ಆದಷ್ಟು ಬೇಗನೆ ಕರ್ನಾಟಕದ ವಿಧಾನಸಭೆಯಲ್ಲಿ ಅಥವಾ ಸಚಿವ ಸಂಪುಟದಲ್ಲಿ ಚರ್ಚಿಸಿ ಸರ್ಕಾರಕ್ಕೆ ಶಿಫಾರಸ್ಸು ಮಾಡಬೇಕೆಂದು ಒತ್ತಾಯಿಸಿದರು.

Edited By : Shivu K
Kshetra Samachara

Kshetra Samachara

20/09/2022 11:42 am

Cinque Terre

14.74 K

Cinque Terre

1

ಸಂಬಂಧಿತ ಸುದ್ದಿ