ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ಆನಂದ ಮಾಮನಿ ನನ್ನ ಸಂಪರ್ಕಕ್ಕೆ ಸಿಕ್ಕಿಲ್ಲ, ಅವರು ಶೀಘ್ರ ಗುಣಮುಖರಾಗಲಿ : ಜೋಶಿ

ಧಾರವಾಡ: ವಿಧಾನಸಭೆ ಉಪ ಸಭಾಧ್ಯಕ್ಷ ಆನಂದ ಮಾಮನಿ ಅವರ ಅನಾರೋಗ್ಯದ ವಿಚಾರ ನನೆ ಮೊನ್ನೆಯಷ್ಟೆ ಗೊತ್ತಾಗಿದೆ. ಅವರನ್ನು ಸಂಪರ್ಕ ಮಾಡಲು ನಾನು ಪ್ರಯತ್ನಿಸಿದ್ದೇನೆ. ಆದರೆ, ಅವರ ಮೊಬೈಲ್ ಸ್ವಿಚ್ಡ್ ಆಫ್ ಇತ್ತು ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದರು.

ಧಾರವಾಡದಲ್ಲಿ ಮಾತನಾಡಿದ ಅವರು, ಮಾಮನಿ ನನ್ನ ಆತ್ಮೀಯ ಸ್ನೇಹಿತರು. ಸಾಮಾಜಿಕ ಜಾಲತಾಣದಲ್ಲಿ ಅವರ ಬಗ್ಗೆ ತಪ್ಪು ಹೇಳಿಕೆ ಹಾಕುತ್ತಿದ್ದಾರೆ. ಇದು ಸರಿಯಲ್ಲ. ತಮ್ಮ ಆರೋಗ್ಯದ ಬಗ್ಗೆ ಈಗಾಗಲೇ ಅವರು ಹೇಳಿಕೆ ಕೊಟ್ಟಿದ್ದಾರೆ. ಯಾರೂ ಕೂಡ ಅನಗತ್ಯವಾಗಿ ಟ್ರೋಲ್ ಮಾಡಬಾರದು ಎಂದರು.

ಯಾರಿಗೆ ಯಾವಾಗ ಏನು ಆಗುತ್ತದೆಯೋ ಗೊತ್ತಿಲ್ಲ. ಚೆನ್ನಾಗಿದ್ದವರೇ ಕುಸಿದು ಬಿದ್ದು ಸಾವಿಗೀಡಾದ ಉದಾಹರಣೆ ಇದೆ. ನಾವು ಕೂಡ ಮಾಮನಿ ಅವರ ಆರೋಗ್ಯ ಸುಧಾರಿಸಲಿ ಎಂದು ದೇವರಲ್ಲಿ ಪ್ರಾರ್ಥನೆ ಮಾಡೋಣ ಎಂದರು.

ಉಮೇಶ ಕತ್ತಿ ಅವರ ಅಕಾಲಿಕ ನಿಧನ ಆಘಾತ ತಂದಿದೆ. ಅವರೊಬ್ಬ ಉತ್ತರ ಕರ್ನಾಟಕದ ಬಗ್ಗೆ ಕಳಕಳಿ ಇದ್ದಂತ ವ್ಯಕ್ತಿ. ಅವರ ಅಗಲಿಕೆಯಿಂದ ನಮ್ಮ ಪಕ್ಷಕ್ಕೆ ತೀವ್ರ ನಷ್ಟ ಉಂಟಾಗಿದೆ. ಅವರ ಜಾಗಕ್ಕೆ ನಾವು ಒಳ್ಳೆಯ ಕಾರ್ಯಕರ್ತರನ್ನು ಹುಡುಕುತ್ತೇವೆ. ಅಭಿವೃದ್ಧಿ ವಿಷಯದಲ್ಲಿ ಕತ್ತಿ ಒಳ್ಳೆಯ ಕೆಲಸ ಮಾಡಿದ್ದಾರೆ. ಅವರಂತಹ ವ್ಯಕ್ತಿಯನ್ನೇ ನಾವು ಹುಡುಕುತ್ತೇವೆ. ಟಿಕೆಟ್ ಕೊಡುವ ವಿಚಾರದ ಬಗ್ಗೆ ಇಷ್ಟು ಬೇಗ ಮಾತನಾಡುವುದು ಸರಿಯಲ್ಲ ಎಂದರು.

ಬೆಂಗಳೂರಿನಲ್ಲಿ ರಾಜಕಾಲುವೆ ಒತ್ತುವರಿ ವಿಷಯಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ಈ ಬಗ್ಗೆ ನಾನು ಸಿಎಂ ಜೊತೆಗೆ ಮಾತನಾಡಿದ್ದೇನೆ. ಬಡವರ ಮನೆಯಷ್ಟೇ ತೆರವು ಮಾಡುತ್ತಿದ್ದಾರೆ ಎಂದು ದೂರು ಇದ್ದವರು ಬಿಬಿಎಂಪಿಗೆ ದೂರು ಕೊಡಲಿ. ಸರ್ಕಾರ ಹಾಗೂ ಬಿಬಿಎಂಪಿ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಲಿದೆ ಎಂದರು.

Edited By :
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

17/09/2022 02:56 pm

Cinque Terre

54.05 K

Cinque Terre

0

ಸಂಬಂಧಿತ ಸುದ್ದಿ