ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ಹೆದರಬೇಡಿ ಧೈರ್ಯದಿಂದಿರಿ: ಮಕ್ಕಳಿಗೆ ಧೈರ್ಯ ಹೇಳಿದ ಪ್ರಿಯಾ ದೇಸಾಯಿ

ಧಾರವಾಡ: ಧಾರವಾಡ ಗ್ರಾಮೀಣ ಕ್ಷೇತ್ರದ ಶಾಸಕ ಅಮೃತ ದೇಸಾಯಿ ಅವರು ಅಧಿವೇಶನದ ಹಿನ್ನೆಲೆಯಲ್ಲಿ ಬೆಂಗಳೂರಿಗೆ ತೆರಳಿದ್ದರೂ ಅವರ ಜಾಗದಲ್ಲಿ ನಿಂತು ಅವರ ಧರ್ಮಪತ್ನಿ ಪ್ರಿಯಾ ದೇಸಾಯಿ ಅವರು ಗಾಯಗೊಂಡವರ ಯೋಗಕ್ಷೇಮ ವಿಚಾರಿಸಿದ್ದಾರೆ.

ಧಾರವಾಡ ತಾಲೂಕಿನ ತಡಕೋಡ ಗ್ರಾಮದಲ್ಲಿ, ಮಳೆಯಿಂದಾಗಿ ಗೋಡೆ ಕುಸಿದು ಬಿದ್ದ ಪರಿಣಾಮ ನಾಲ್ಕು ಮಕ್ಕಳು ಹಾಗೂ ಅವರ ತಾಯಿ ತೀವ್ರವಾಗಿ ಗಾಯಗೊಂಡು ಧಾರವಾಡ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಜಿಲ್ಲಾ ಆಸ್ಪತ್ರೆಗೆ ಭೇಟಿ ನೀಡಿದ ಪ್ರಿಯಾ ದೇಸಾಯಿ ಅವರು, ಗಾಯಗೊಂಡ ಮಕ್ಕಳ ಯೋಗಕ್ಷೇಮ ವಿಚಾರಿಸಿದ್ದಾರೆ. ಧೈರ್ಯದಿಂದಿರಿ ಏನೂ ಆಗೋದಿಲ್ಲ. ಅರಾಮ ಆಗ್ತೀರಿ. ಅರಾಮ ಆದ್ಮೇಲೆ ನಮ್ಮ ಮನೆಗೆ ಬನ್ನಿ ಎಂದು ಧೈರ್ಯ ಹೇಳಿದ್ದಾರೆ. ಅಲ್ಲದೇ ಮಕ್ಕಳಿಗೆ ತಿನಿಸು ಕೊಟ್ಟು ಅವರ ಪೋಷಕರಿಗೂ ಧೈರ್ಯ ಹೇಳುವ ಕೆಲಸ ಮಾಡಿದ್ದಾರೆ.

Edited By : Manjunath H D
Kshetra Samachara

Kshetra Samachara

14/09/2022 08:41 pm

Cinque Terre

29.08 K

Cinque Terre

2

ಸಂಬಂಧಿತ ಸುದ್ದಿ