ಧಾರವಾಡ: ಬೆಂಗಳೂರಿನಲ್ಲಿ ರಾಜ ಕಾಲುವೆ ಒತ್ತುವರಿ ವಿಚಾರಕ್ಕೆ ಸಂಬಂಧಿಸಿದಂತೆ ಧಾರವಾಡದಲ್ಲಿ ಲೋಕಾಯುಕ್ತ ನಿವೃತ್ತ ನ್ಯಾಯಮೂರ್ತಿ ಸಂತೋಷ ಹೆಗ್ಡೆ ಪ್ರತಿಕ್ರಿಯಿಸಿದ್ದಾರೆ.
ಬಹಳ ಹಿಂದೆಯೇ ನಾನು ಆ ಬಗ್ಗೆ ಎರಡು ವರದಿ ಕೊಟ್ಟಿದ್ದೆನೆ, ಎನ್‌ಜಿಟಿ ಹಾಗೂ ಸರ್ಕಾರಕ್ಕೆ ವರದಿ ಕೊಟ್ಟಿದ್ದೇ ಮಹಾರಾಜರು. ಹಿಂದೆ ನೂರಾರು ಕೆರೆ ಕಟ್ಟಿದ್ರು, ಮಳೆ ನೀರಿನಿಂದ ಸಂಗ್ರಹಿಸುವ ಕೆರೆ ಅವು. ಅಂದು ಮಳೆ ಬಂದಾಗ ಕೆರೆಗಳಿಗೆ ನೀರು ಹೋಗುತಿತ್ತು, ಆಗ ಸುಮಾರು 200 ಕೆರೆ ಇದ್ದವು ಎಂದಿದ್ದಾರೆ.
ಭಾಷಾವಾರು ಪ್ರಾಂತ ಆದಾಗ ಬೆಂಗಳೂರು ರಾಜಧಾನಿ ಆಯ್ತು ಆಗ ಇಲ್ಲಿ ದಿಢೀರ್ ಅಂತಾ ಜನಸಂಖ್ಯೆ ಹೆಚ್ಚಾಯ್ತು ಆಗ ಸರ್ಕಾರ ಯೋಜನೆ ಮಾಡಿ ಜಾಗಕೊಡುವುದನ್ನ ಬಿಟ್ಟು ರಾಜಕಾಲುವೆ ಒತ್ತುವರಿ ಮಾಡಲು ಬಿಟ್ರು ನೀರು ಹೋಗುವ ರಾಜಕಾಲುವೆ ಈಗ ಅಲ್ಲಿ ಇಲ್ಲ. ಅಲ್ಲಿ ಒತ್ತುವರಿ ಮಾಡಿ ಮನೆ ಕಟ್ಟಿದ್ದಾರೆ. ಈಗ ಮಳೆ ಬಂದರೆ ನೀರು ಹೋಗಲು ಜಾಗ ಇಲ್ಲ.
ಕೆಲವರು ತಮ್ಮ ಲಾಭಕ್ಕಾಗಿ ಒತ್ತುವರಿ ಮಾಡಿದ್ದು ಇದೆ ಸುಭಾಷನಗರ ಬಸ್ ನಿಲ್ದಾಣ ಕೆರೆ ಇತ್ತು, ಸಂಪಂಗಿಯಲ್ಲಿ ಕ್ರೀಡಾಂಗಣ ಮಾಡಿದ್ದಾರೆ. ಅಕ್ಕಿ ತಿಮ್ಮನ ಹಳ್ಳಿಯಲ್ಲಿ ಹಾಕಿ ಕ್ರೀಡಾಂಗಣ ಮಾಡಿದ್ದಾರೆ. ಎಲ್ಲ ಕೆರೆ ಬಿಡಿಎ ಮುಖಾಂತರ ಲಾಭಕ್ಕೆ ಬಳಕೆಯಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಇದರಲ್ಲಿ ಜನರ ದುರಾಸೆ ಕೂಡಾ ಇದೆ, ಅಧಿಕಾರದಲ್ಲಿ ಇದ್ದವರ ಹಾಗೂ ಇಲ್ಲದೇ ಇರುವವರ ದುರಾಸೆ ಕೂಡಾ ಇದೆ. ಐಟಿ ಕಂಪೆನಿಗಳು ಕೂಡಾ ಕೈವಾಡ ಹಾಕಿದ್ದಾರೆ. ಆಗರ್ಭ ಶ್ರೀಮಂತರು ಕಟ್ಟಿದ ಕಟ್ಟಡದಲ್ಲಿ ಕೂಡ ಒತ್ತುವರಿಯಾಗಿದೆ ಎಂದರು.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
11/09/2022 05:23 pm