ಹುಬ್ಬಳ್ಳಿ:ರಾಜ್ಯದ ಹಿರಿಯ ರಾಜಕಾರಣಿ ಹಾಗೂ ಸಚಿವರಾಗಿದ್ದ ಉಮೇಶ ಕತ್ತಿಯವರ ನಿಧನಕ್ಕೆ ಸಮಾಜ ಕಲ್ಯಾಣ ಇಲಾಖೆ ಸಚಿವ ಕೋಟಾ ಶ್ರೀನಿವಾಸ ಅವರು ನಗರದಲ್ಲಿ ಸಂತಾಪ ಸೂಚಿಸಿದರು.
ಉಮೇಶ ಕತ್ತಿಯವರ ನಡೆ-ನುಡಿ, ನೇರ ಮಾತುಕತೆಯಿಂದ ರಾಜೀ ಇಲ್ಲದ ಜೀವನ ಸಾಗಿಸಿದ್ದರು,ಕಳೆದ ಮೂರು ದಿನಗಳ ಹಿಂದೆ ನಾನು ಅವರ ಜೊತೆ ಮಾತನಾಡಿ ನಮ್ಮ ಕ್ಷೇತ್ರದ ಕೆಲವು ಸಮಸ್ಯೆಗಳ ಬಗ್ಗೆ ಅವರಿಗೆ ಹೇಳಿದ್ದೆ,ಕೂಡಲೇ ಈ ಬಗ್ಗೆ ನಾನು ಕ್ರಮ ಕೈಗೊಂಡು ಸಮಸ್ಯೆ ಬಗೆಹರಿಸುತ್ತೇನೆ ಅಂತಾ ಹೇಳಿದ್ದರು.
ನನ್ನ ಇಲಾಖೆಯಲ್ಲಿ ಏನಾದ್ರು ಕೆಲಸ ಆಗಬೇಕು ಅಂದಾಗ ನನ್ನ ಜೊತೆ ಮಾತುಕತೆ ನಡೆಸುತ್ತಿದ್ದರು,ನಾನು ಕೂಡಾ ನನ್ನ ಇಲಾಖೆಯ ಕೆಲಸ ಇದ್ದಾಗ ಅವರ ಜೊತೆ ಮಾತುಕತೆ ನಡೆಸಿ ಕೆಲಸವನ್ನು ಮಡುತ್ತಿದ್ದೆವು, ಅಂತಾ ಸಚಿವ ಕೋಟಾ ಶ್ರೀನಿವಾಸ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದರು.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
07/09/2022 05:46 pm