ಹುಬ್ಬಳ್ಳಿ; ಹುಬ್ಬಳ್ಳಿಯ ಪೊಲೀಸ್ ಠಾಣೆ ಉದ್ಘಾಟನಾ ಸಮಾರಂಭದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ, ಕಾಂಗ್ರೆಸ್ ಶಾಸಕರಿಗೆ ಟಾಂಗ್ ಕೊಟ್ಟಿದ್ದಾರೆ. ಕಾಂಗ್ರೆಸ್ ಶಾಸಕ ಪ್ರಸಾದ ಅಬ್ಬಯ್ಯ ಗೆ ಸಿಎಂ ಟಾಂಗ್ ಕೊಟ್ಟಿದ್ದಾರೆ. ನೀನು ಮೈಕ್‌ನಲ್ಲಿ ನನ್ನನ್ನು ಹೊಗಳಿದರೆ ನಿನ್ನ ಶಿಷ್ಯರು ಯಾರನ್ನೂ ಬಿಡೋಲ್ಲ. ನೀನು ಆ ನಿರೀಕ್ಷೆ ಇಟ್ಟುಕೊಂಡು ಹೊಗಳಬೇಡ. ನಿನ್ನ ಆಲೋಚನೆ ನನಗೂ ಸ್ವಲ್ಪ ತಿಳಿಯುತ್ತೆ. ನಿನ್ನ ಶಿಷ್ಯರು ಅಪರಾಧ ಕೃತ್ಯ ಮಾಡಿದ್ರೆ ಬಿಟ್ಟು ಬಿಡೊ ಪ್ರಶ್ನೆಯಿಲ್ಲ ಅಂತ ಪರೋಕ್ಷ ಎಚ್ಚರಿಕೆ ನೀಡಿದರು.
ನಿಮ್ಮ ಸರ್ಕಾರವಿದ್ದಾಗ ನಾವೂ ಹೀಗೆಯೇ ವೇದಿಕೆ ಮೇಲೆ ಕೇಳುತ್ತಿದ್ದೆವು. ನಮ್ಮ ಯಾವ ಮನವಿಯನ್ನೂ ನಿಮ್ಮ ಸರ್ಕಾರ ಲೆಕ್ಕಕ್ಕಿಡುತ್ತಿದ್ದಿಲ್ಲ. ಆದರೆ ಕನಿಷ್ಟ ನೀವು ಮಾಡೋ ಮನವಿಗೆ ಸ್ಪಂದಿಸೋ ಸರ್ಕಾರ ಈಗ ಬಂದಿದೆ. ಸಿಎಂ ಮಾತಿನಿಂದ ಮುಜುಗರಕ್ಕೊಳಗಾದ ಶಾಸಕ ಪ್ರಸಾದ ಅಬ್ಬಯ್ಯ ನಸುನಕ್ಕು ಸುಮ್ಮನೆ ಕುಳಿತರು. ಸಿಎಂ ಭಾಷಣ ಮಾಡಿದ್ದ ಪ್ರಸಾದ ಅಬ್ಬಯ್ಯ, ಹಲವು ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿದ್ದರು. ಹುಬ್ಬಳ್ಳಿಯ ಗೋಕುಲ್ ರಸ್ತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಘಟನೆ ನಡೆದಿದೆ...
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
05/09/2022 01:44 pm