ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ತೆಲಂಗಾಣ ಶಾಸಕನ ಬಂಧನ; ಶ್ರೀರಾಮ ಸೇನೆ ಆಕ್ರೋಶ

ಧಾರವಾಡ: ತೆಲಂಗಾಣ ಶಾಸಕ ರಾಜಾಸಿಂಗ್ ಠಾಕೂರ್ ಅವರ ಬಂಧನ ಖಂಡಿಸಿ ಧಾರವಾಡದಲ್ಲಿ ಶ್ರೀರಾಮ ಸೇನೆ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

ಮಹಮ್ಮದ್ ಪೈಗಂಬರ್‌ರ ಕುರಿತು ವಿವಾದಿತ ಹೇಳಿಕೆ ನೀಡಿದ್ದರಿಂದ ತೆಲಂಗಾಣ ಸರ್ಕಾರ ಶಾಸಕ ರಾಜಾಸಿಂಗ್ ಅವರನ್ನು ಬಂಧಿಸಿತ್ತು. ಬಂಧನದ ಕೆಲ ದಿನಗಳ ನಂತರ ಅವರನ್ನು ಬಿಡುಗಡೆ ಮಾಡಿದ್ದ ಸರ್ಕಾರ, ಈಗ ಮತ್ತೆ ಬಂಧನ ಮಾಡಿದೆ. ಈ ಬೆಳವಣಿಗೆ ಖಂಡಿಸಿ ಶ್ರೀರಾಮ ಸೇನೆ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ.

ತೆಲಂಗಾಣ ಸರ್ಕಾರ ಕೂಡಲೇ ಶಾಸಕ ರಾಜಾಸಿಂಗ್ ಅವರನ್ನು ಬಿಡುಗಡೆ ಮಾಡಬೇಕು. ಪ್ರಜಾಪ್ರಭುತ್ವದಲ್ಲಿ ಎಲ್ಲರಿಗೂ ಅಭಿಪ್ರಾಯ ಮಂಡಿಸುವ ಹಕ್ಕಿದೆ. ಸಂವಿಧಾನ ವಾಕ್ ಸ್ವಾತಂತ್ರ್ಯ ನೀಡಿದೆ. ಆದರೆ, ತೆಲಂಗಾಣ ಸರ್ಕಾರ ಕಾನೂನು ಗಾಳಿಗೆ ತೂರಿ ಶಾಸಕ ಠಾಕೂರ್ ಅವರನ್ನು ಬಂಧಿಸಿದೆ. ಒಬ್ಬ ಚುನಾಯಿತ ಪ್ರತಿನಿಧಿಯನ್ನು ಅಕ್ರಮವಾಗಿ ಬಂಧಿಸುವುದು ಅಪರಾಧ. ಕೂಡಲೇ ರಾಜಾಸಿಂಗ್ ಠಾಕೂರ್ ಅವರನ್ನು ಬಿಡುಗಡೆ ಮಾಡಬೇಕು ಎಂದು ಶ್ರೀರಾಮ ಸೇನೆ ಕಾರ್ಯಕರ್ತರು ಒತ್ತಾಯಿಸಿದರು.

Edited By : Manjunath H D
Kshetra Samachara

Kshetra Samachara

01/09/2022 04:11 pm

Cinque Terre

13.81 K

Cinque Terre

2

ಸಂಬಂಧಿತ ಸುದ್ದಿ