ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅಣ್ಣಿಗೇರಿ: ಹಳ್ಳಗಳ ಅಗಲೀಕರಣದಿಂದ ಕೃಷಿ ಜಮೀನಿಗೆ ರಕ್ಷಣೆ; ಮಾಜಿ ಶಾಸಕ ಕೋನರೆಡ್ಡಿ ಅಭಿಮತ

ಅಣ್ಣಿಗೇರಿ: ನವಲಗುಂದ ವಿಧಾನಸಭಾ ಕ್ಷೇತ್ರದ ಗ್ರಾಮಗಳಲ್ಲಿ ವರ್ಷದಲ್ಲಿ 2-3 ಬಾರಿ ಹಳ್ಳಗಳು ಮೂಡುತ್ತಿರುವುದರಿಂದ ಪದೇ ಪದೆ ರೈತರ ಜಮೀನುಗಳಿಗೆ ಮಳೆನೀರು ನುಗ್ಗಿ ಬೆಳೆಗಳು ಹಾಳಾಗಿ ಹೋಗುತ್ತಿವೆ. ಇದರಿಂದ ಪಾರಾಗಲು ಶಾಶ್ವತವಾದ ಕಾಮಗಾರಿ ಮೂಲಕ ಸರ್ಕಾರ ಪರಿಹಾರ ಒದಗಿಸಬೇಕೆಂದು ಮಾಜಿ ಶಾಸಕ ಎನ್. ಹೆಚ್. ಕೋನರೆಡ್ಡಿ ಹೇಳಿದರು.

ಅವರು ಪಬ್ಲಿಕ್ ನೆಕ್ಸ್ಟ್ ಜೊತೆ ಮಾತನಾಡಿ, ಮೂರ್ನಾಲ್ಕು ದಿನಗಳಿಂದ ಸುರಿಯುತ್ತಿರುವ ಮಳೆಯಿಂದ ತಾಲೂಕಿನ ಗ್ರಾಮಗಳಾದ ನಲವಡಿ, ಭದ್ರಾಪುರ, ಮನಕವಾಡ, ಶಿಶ್ವಿನಹಳ್ಳಿ, ಗ್ರಾಮಗಳಿಗೆ ಭೇಟಿ ನೀಡಿದ್ದು, ಅನಾಹುತ ಕಂಡಿದ್ದೇನೆ. ಸರ್ಕಾರ ಹಳ್ಳಗಳನ್ನು ಅಗಲೀಕರಣ ಮಾಡಬೇಕು. ಇಲ್ಲವಾದರೆ ರೈತರ ಜಮೀನುಗಳಿಗೆ ನೀರು ನುಗ್ಗಿ ತುಂಬಾ ಹಾನಿಯಾಗುತ್ತದೆ. ಶಾಶ್ವತವಾಗಿ ಅಗಲೀಕರಣ ವಾದ ನಂತರವಷ್ಟೇ ನಮ್ಮ ರೈತರ ಜಮೀನು ಉಳಿಯಲು ಸಾಧ್ಯ ಎಂದರು.

ಇನ್ನು, ಸರಕಾರ ಈ ಹಾನಿಯನ್ನು ತುಂಬಿಕೊಡಲು ಎನ್ ಡಿ ಆರ್ ಎಫ್ ಗೈಡ್ ಲೈನ್ಸ್ ತಂದಿದೆ. ಅದರಿಂದ 2ರಿಂದ 3 ಸಾವಿರ ಮಾತ್ರ ಪರಿಹಾರ ಸಿಗುತ್ತದೆ. ಆ ಹಣದಿಂದ ರೈತರಿಗೆ ಏನು ಸಾಧ್ಯವಾಗುವುದಿಲ್ಲ. ಇನ್ನೊಂದು ವಿಶೇಷ ನಿಯಮ ಮಾಡಿದ್ದು, ಕನಿಷ್ಠ 33 ಸಾವಿರ ರೂ. ಕೊಡಬೇಕು ಅಂತಿದೆ. ಆ ಪರಿಹಾರವನ್ನು ವಿತರಿಸಬೇಕೆಂದು ಸರ್ಕಾರವನ್ನು ಒತ್ತಾಯಿಸಿದರು.

Edited By :
Kshetra Samachara

Kshetra Samachara

30/08/2022 10:48 pm

Cinque Terre

25.39 K

Cinque Terre

0

ಸಂಬಂಧಿತ ಸುದ್ದಿ