ಹುಬ್ಬಳ್ಳಿ: ಕಿಮ್ಸ್ ಕಾರ್ಡಿಯಾಲಜಿ ಬ್ಲಾಕ್‌ನಲ್ಲಿ ಕೇಂದ್ರ ಪುರಸ್ಕೃತ ಅನುದಾನದಲ್ಲಿ ನೂತನ 4D ಇಕೋ ಮಷಿನ್ ಹಾಗೂ ಕಿಮ್ಸ್ ಅನುದಾನದಲ್ಲಿ ಹೊಸ ಕ್ಯಾತ್ ಲ್ಯಾಬ್ ಘಟಕಗಳನ್ನು ಕೇಂದ್ರ ಸಚಿವರಾದ ಪ್ರಲ್ಹಾದ ಜೋಶಿ ಹಾಗೂ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಉದ್ಘಾಟಿಸಿದರು.
ಸುಮಾರು ದಿನಗಳಿಂದ ಬಹು ಬೇಡಿಕೆ ಹೊಂದಿದ್ದ ಕಾರ್ಡಿಯಾಲಜಿ ಬ್ಲಾಕ್ ನಲ್ಲಿ ಅಧುನಿಕ ಮಾದರಿಯ 4D ಇಕೋ ಮಷಿನ್ ಉದ್ಘಾಟಿಸಿದ ಸಚಿವರು, ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಅದೇ ರೀತಿ ಕಿಮ್ಸ್ ಆಡಳಿತ ಮಂಡಳಿ ಹಾಗೂ ಸಿಬ್ಬಂದಿ ಸೂಕ್ತ ನಿರ್ವಹಣೆಯ ಮೂಲಕ ಸಾರ್ವಜನಿಕರ ಸೇವೆಗೆ ಮುಕ್ತವಾಗಿ ನೀಡಬೇಕು ಎಂದು ಸೂಚನೆ ನೀಡಿದರು.
Kshetra Samachara
30/08/2022 01:13 pm