ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನವಲಗುಂದ: ಸಭೆ-ಸಭಾರಂಭಗಳಿಗೆ ಮಾತ್ರ ಸೀಮಿತರಾಗಿದ್ದಾರಾ ಸಚಿವ ಮುನೇನಕೊಪ್ಪ?

ನವಲಗುಂದ: ಸಚಿವ ಶಂಕರ ಪಾಟೀಲ ಮುನೇನಕೊಪ್ಪ, ನವಲಗುಂದ ವಿಧಾನ ಸಭಾ ಮತಕ್ಷೇತ್ರದ ಶಾಸಕರು, ರಾಯಚೂರ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಸಕ್ಕರೆ, ಜವಳಿ ಖಾತೆ ಸಚಿವರು. ಇಷ್ಟೆಲ್ಲಾ ಜವಾಬ್ದಾರಿ ಹೊತ್ತ ಅವರಿಗೆ ಈಗ ತಮ್ಮ ಸ್ವಕ್ಷೇತ್ರ ನವಲಗುಂದ ಕಾಣುತ್ತಲೇ ಇಲ್ಲ ಎಂಬ ಮಾತುಗಳು ಸಾರ್ವಜನಿಕ ವಲಯದಲ್ಲಿ ಕಾಮನ್ ಆಗಿ ಬಿಟ್ಟಿದೆ.

ಕೇವಲ ಸಭೆ, ಸಮಾರಂಭ, ಭೂಮಿ ಪೂಜೆಗಳಿಗಷ್ಟೇ ಸಚಿವರು ಸೀಮಿತವಾಗಿದ್ದಾರೆ. ರೈತರ ಸಮಸ್ಯೆ ಹಾಗೂ ಸಾರ್ವಜನಿಕರ ಸಮಸ್ಯೆಗಳತ್ತ ಗಮನಹರಿಸೋದೇ ಇಲ್ಲ ಎಂಬ ಜನಾಭಿಪ್ರಾಯ ಕೇಳಿ ಬರುತ್ತಿದೆ. ಕೆಲವೊಮ್ಮೆ ಮನವಿ ನೀಡಬೇಕಾದ್ರೆ ನವಲಗುಂದದಿಂದ ಜನರು ಹುಬ್ಬಳ್ಳಿಗೆ ತೆರಳಿ ಅವರ ಗೃಹ ಕಚೇರಿಯಲ್ಲಿ ಮನವಿ ಕೊಡುವಂತಹ ದೌರ್ಭಾಗ್ಯ ನವಲಗುಂದ ಜನರದ್ದಾಗಿದೆ.

ಇನ್ನು ನವಲಗುಂದಕ್ಕೆ ಆಗಮಿಸಿದರೆ ಕೇವಲ ಅವರ ಕಚೇರಿ ಹಾಗೂ ಸಭೆ ಸಮಾರಂಭಗಳಿಗೆ ತೆರಳಿ ಅಲ್ಲಿಂದ ವಾಪಸ್ ತೆರಳುತ್ತಾರೆ ಎಂಬ ಆರೋಪಗಳಿವೆ. ಸಾಮಾನ್ಯ ಜನರ ಕಷ್ಟಕ್ಕೆ ಸ್ಪಂದಿಸಿ, ಸಮಸ್ಯೆಗಳ ಸ್ಥಳಕ್ಕೆ ಭೇಟಿ ನೀಡುವ ಯಾವ ಕೆಲಸಗಳು ಸಹ ನಡೆಯುತ್ತಿಲ್ಲ. ಸಚಿವರನ್ನು ಕಾಣೋದೆ ಕಷ್ಟ ಎಂಬ ವಾತಾವರಣ ಸೃಷ್ಟಿಯಾಗಿದೆ.

ಮಹದಾಯಿ, ಬೆಳೆ ಹಾನಿ, ಬೆಂಬಲ ಬೆಲೆ ಖರೀದಿ ಕೇಂದ್ರ, ರಸ್ತೆ ಅವ್ಯವಸ್ಥೆ ಅತಿವೃಷ್ಟಿ ಹಾನಿ ಇಂತಹ ಹತ್ತು ಹಲವಾರು ಸಮಸ್ಯೆಗಳು ನವಲಗುಂದದಲ್ಲಿವೆ. ಆದರೆ ವಾರಕ್ಕೆ ಒಂದೆರಡು ಬಾರಿ ಆಗಮಿಸುವ ಸಚಿವರು ಈ ಬಗ್ಗೆ ಗಮನ ಹರಿಸದೆ, ಸಂಕಷ್ಟದಲ್ಲಿರುವ ಜನರ ಅಳಲು ಕೇಳದೆ, ಹೋದ ಪುಟ್ಟ ಬಂದ ಪುಟ್ಟ ಎಂಬಂತೆ ಕಣ್ಮರೆ ಆಗಿ ಬಿಡುತ್ತಾರೆ ಎನ್ನುವ ಅಸಮಧಾನ ಇದೆ.

-ವಿನೋದ ಇಚ್ಚಂಗಿ, ಪಬ್ಲಿಕ್ ನೆಕ್ಸ್ಟ್ ನವಲಗುಂದ

Edited By : Nagesh Gaonkar
Kshetra Samachara

Kshetra Samachara

28/08/2022 03:04 pm

Cinque Terre

37.93 K

Cinque Terre

16

ಸಂಬಂಧಿತ ಸುದ್ದಿ