ಧಾರವಾಡ: ಪ್ರಸಕ್ತ ವರ್ಷದ ಗಣೇಶ ಚತುರ್ಥಿ ಹೊಸ ತಿರುವು ಪಡೆದುಕೊಂಡಿದೆ. ವೀರ ಸಾವರ್ಕರ್ ಭಾವಚಿತ್ರ ವಿವಾದ ಹುಟ್ಟಿಕೊಂಡಿದ್ದು, ಗಣೇಶನ ಮೂರ್ತಿ ಪ್ರತಿಷ್ಠಾಪಿಸುವ ಪೆಂಡಾಲ್‌ಗಳಲ್ಲಿ ವೀರ ಸಾವರ್ಕರ್ ಫೋಟೋ ಹಾಕಲು ಹಿಂದೂ ಸಂಘಟನೆಗಳು ಮುಂದಾಗಿವೆ.
ಈ ಅಭಿಯಾನಕ್ಕೆ ಸ್ವತಃ ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ ಮುತಾಲಿಕ್ ಅವರೇ ಚಾಲನೆ ನೀಡಿದ್ದು, ಬುಧವಾರ ಧಾರವಾಡದ ವಿವಿಧ ಗಣೇಶನ ಮಂಡಳಿಗೆ ಮುತಾಲಿಕ್ ಅವರೇ ಸಾವರ್ಕರ್ ಭಾವಚಿತ್ರ ನೀಡಿ ಗಣಪತಿ ಪೆಂಡಾಲ್‌ಗಳಲ್ಲಿ ಆ ಭಾವಚಿತ್ರ ಹಾಕುವಂತೆ ಮನವಿ ಮಾಡಿದ್ದಾರೆ.
ಧಾರವಾಡದ ಶಿವಾಜಿ ವೃತ್ತದ ಬಳಿಯ ವಿವಿಧ ಗಣೇಶನ ಮಂಡಳಿಗೆ ಮುತಾಲಿಕ್ ಸಾವರ್ಕರ್ ಭಾವಚಿತ್ರ ನೀಡಿದರು. ಅಲ್ಲದೇ ಈಗಾಗಲೇ 25 ಗಣೇಶನ ಮಂಡಳಿಗಳಿಗೆ ಭಾವಚಿತ್ರ ನೀಡಲಾಗಿದೆ ಎಂದಿದ್ದಾರೆ.
Kshetra Samachara
24/08/2022 03:48 pm