ಕುಂದಗೋಳ : ಕುಂದಗೋಳ ತಾಲೂಕಿನ ಮಳಲಿ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ತಹಶಿಲ್ದಾರರ ಗ್ರಾಮ ವಾಸ್ತವ್ಯ ಕಾರ್ಯಕ್ರಮವನ್ನು ಸಸಿಗೆ ನಿರೆರೇದು ಉದ್ಘಾಟಿಸಿ ಮಾತನಾಡಿ ಮಳಲಿ ಸೇರಿದಂತೆ ಸುತ್ತಮುತ್ತಲಿನ ಹಳ್ಳಿಗರ ಸಮಸ್ಯೆಗಳಿಗೆ ವೇದಿಕೆ ಕಲ್ಪಿಸಿದರು.
ಈ ವೇದಿಕೆಯಲ್ಲಿ ಸಾಮಾನ್ಯವಾಗಿ ಸಾರಿಗೆ ಬಸ್ ಸಮಸ್ಯೆ, ಪಶು ವೈದ್ಯಾಧಿಕಾರಿ ಕೊರತೆ, ಆರೋಗ್ಯ ಇಲಾಖೆ ನಿರ್ಲಕ್ಷ್ಯ, ಬೆಳೆ ವಿಮೆ ಪರಿಹಾರ, ರಸ್ತೆ, ಚರಂಡಿ ಮೂಲ ಸೌಕರ್ಯಗಳೇ ಸಮಸ್ಯೆ ಎದ್ದು ತೋರಿದವು. ಈ ಎಲ್ಲ ಸಮಸ್ಯೆಗಳನ್ನೂ ಆಲಿಸಿದ ಅಧಿಕಾರಿಗಳು ಕೂಡಲೇ ಸರಿಪಡಿಸುವುದಾಗಿ ತಿಳಿಸಿದ್ದಾರೆ. ಇನ್ನೂ ಸ್ಥಳದಲ್ಲೇ ಬಂದಂತಹ 50 ಅರ್ಜಿಗಳನ್ನು ಅಧಿಕಾರಿಗಳು ಬಗೆಹರಿಸಿದ್ದು ವಿಶೇಷವಾಗಿತ್ತು.
ಇನ್ನೂ ಕಾರ್ಯಕ್ರಮ ಆರಂಭದಿಂದ ಅಲ್ಪ ಸ್ವಲ್ಪ ಮಳೆ ಕಾಡಿದರೂ ಸಹ ಗ್ರಾಮ ವಾಸ್ತವ್ಯಕ್ಕೆ ಎಲ್ಲಾ ಅಧಿಕಾರಿಗಳು ಹಾಜರಿರುವುದು ಮಾತ್ರ ಯಶಸ್ವಿ ಎನ್ನಬಹುದು ಆದ್ರೇ, ಈ ಹಿಂದಿನ ಹಳ್ಳಿಗಳ ತಹಶೀಲ್ದಾರರ ಗ್ರಾಮ ವಾಸ್ತವ್ಯ ಅಲ್ಲಿನ ಜನ ಹೇಳಿದ ಅನಾಭಿವೃದ್ಧಿ ಕಥೆ ಅವಲೋಕಿಸಿದರೇ, ಮಳಲಿ ಗ್ರಾಮ ವಾಸ್ತವ್ಯದಿಂದ ಎಷ್ಟು ಸಮಸ್ಯೆ ಬಗೆಹರಿಯಲಿವೆ ಎಂಬುದು ಕಾದು ನೋಡಬೇಕಿದೆ.
Kshetra Samachara
20/08/2022 05:27 pm