ಧಾರವಾಡ: ನಿನ್ನೆ ಕಾಂಗ್ರೆಸ್ ಕಾರ್ಯಕರ್ತರು ಸ್ವಾತಂತ್ರ್ಯ ಹೋರಾಟಗಾರ ವೀರ ಸಾವರ್ಕರ್ ಅವರ ಭಾವಚಿತ್ರ ಸುಟ್ಟಿದ್ದಕ್ಕೆ ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ ಮುತಾಲಿಕ್ ಅವರು ಕಾಂಗ್ರೆಸ್ ಕಾರ್ಯಕರ್ತರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಧಾರವಾಡದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಕಾರ್ಯಕರ್ತರು ನಿನ್ನೆ ಮಾಡಿದ್ದು ಹೇಯ ಕೃತ್ಯ. ಇದು ಅವರ ದೇಶದ್ರೋಹಿ ಕೃತ್ಯ. ಕಾಂಗ್ರೆಸ್ನವರು ಕೇವಲ ಸಾವರ್ಕರ್ ಫೋಟೋ ಸುಟ್ಟಿಲ್ಲ ಭಾರತ ಮಾತೆಯನ್ನೇ ಅವರು ಸುಟ್ಟಿದ್ದಾರೆ ಎಂದರು.
ಸಿದ್ದರಾಮಯ್ಯನವರಿಗೆ ಮೊಟ್ಟೆ ಎಸೆದದ್ದು ತಪ್ಪು ಎಂದಾದರೆ, ಜೈಲಿನಲ್ಲಿ 23 ವರ್ಷ ಕಳೆದ ಒಬ್ಬ ಸ್ವಾತಂತ್ರ್ಯ ಹೋರಾಟಗಾರ ಸಾವರ್ಕರ್ ಅವರಿಗೆ ಅಪಮಾನ ಮಾಡಿದ್ದು ತಪ್ಪಲ್ಲವೇ? ಕೂಡಲೇ ಕಾಂಗ್ರೆಸ್ನವರು ಕ್ಷಮೆಯಾಚಿಸಬೇಕು. ಇಂದಿರಾ ಗಾಂಧಿಯವರೇ ಸಾವರ್ಕರ್ ಅವರ ಚಿತ್ರವನ್ನು ಅಂಚೆ ಚೀಟಿ ಮೂಲಕ ಬಿಡುಗಡೆ ಮಾಡಿದ್ದರು. ನಿನ್ನೆ ಧಾರವಾಡದಲ್ಲಿ ಸಾವರ್ಕರ್ ಅವರ ಭಾವಚಿತ್ರ ಸುಟ್ಟ ಮನೆಯವರ ಮುಂದೆ ಧರಣಿ ಮಾಡುತ್ತೇವೆ ಎಂದರು.
ಸಿದ್ದರಾಮಯ್ಯ ರಂಬಾಪುರಿ ಶ್ರೀಗಳನ್ನು ಭೇಟಿ ಮಾಡಿದ ವಿಷಯಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ಮುತಾಲಿಕ್, ಕಾಂಗ್ರೆಸ್ ಬುಟಾಟಿಕೆ ಎಲ್ಲರಿಗೂ ಗೊತ್ತಿದೆ. ಮತಕ್ಕಾಗಿ ಎಲ್ಲ ಮಠಗಳಿಗೆ ಹೋಗುತ್ತಾರೆ. ಚುನಾವಣೆ ಬಂದಾಗ ಉದ್ದ, ಅಡ್ಡ ಬೀಳುತ್ತಾರೆ. 60 ವರ್ಷದ ಕಾಂಗ್ರೆಸ್ ನಾಟಕ ಬಯಲಾಗಿದೆ ಎಂದರು.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
20/08/2022 01:34 pm