ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ದೇಶದಲ್ಲಿ ಈಗಿರುವ ಕಾಂಗ್ರೆಸ್ ನಕಲಿ ಕಾಂಗ್ರೆಸ್ : ಕೇಂದ್ರ ಸಚಿವ ಜೋಶಿ ಲೇವಡಿ

ಹುಬ್ಬಳ್ಳಿ: ಬಿಜೆಪಿಯಿಂದ ಮಾಜಿ ಸಿಎಂ ಸಿದ್ಧರಾಮಯ್ಯ ಪಂಥಾಹ್ವಾನ ವಿಚಾರದ ಹಿನ್ನೆಲೆಯಲ್ಲಿ, ಸಿದ್ಧರಾಮಯ್ಯ ಅವರು ರಾಜ್ಯ ಕಂಡ ಮುಖ್ಯಮಂತ್ರಿಗಳು. ಬಿಜೆಪಿ ನಾಯಕರು ಇಂತಹ ಘಟನೆಗಳಿಗೆ ಯಾವುದೇ ರೀತಿಯ ಪ್ರಚೋದನೆ ನೀಡಲ್ಲ. ಪ್ರಜಾಪ್ರಭುತ್ವದಲ್ಲಿ ಎಲ್ಲರಿಗೂ ಪ್ರತಿಭಟನೆ ಮಾಡುವ ಹಕ್ಕು ಇದೆ. ಆದ್ರೆ ಯಾರೂ ಲಕ್ಷ್ಮಣ ರೇಖೆ ಮೀರಬಾರದು. ಸಿದ್ದರಾಮಯ್ಯ ಅವರ ಮೇಲೆ ಮೊಟ್ಟೆ ಎಸಗಿರುವುದು ಸರಿಯಲ್ಲವೆಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದರು.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವೀರ ಸಾವರ್ಕರ್ ಅವರು ದೇಶಭಕ್ತರು ಅಂತ ಮಹಾತ್ಮಾ ಗಾಂಧಿ ಅವರೂ ಸಹ ಒಪ್ಪಿಕೊಂಡಿದ್ದರು. ಇಂದಿರಾ ಗಾಂಧಿಯವರೂ ಸಹ ಅವರನ್ನ ಒಪ್ಪಿಕೊಂಡಿದ್ದರು. ಆದ್ರೆ ಸಿದ್ಧರಾಮಯ್ಯ ಅವರು ಈ ರೀತಿ ಹಗುರವಾಗಿ ಮಾತನಾಡುವುದು ಸರಿಯಲ್ಲ. ಇಂದಿರಾಗಾಂಧಿ ಅವರ ಪತ್ರಗಳನ್ನೇ ಕಾಂಗ್ರೆಸ್ ನವರು ಒಪ್ಪಿಕೊಳ್ಳಲು ತಯಾರಿಲ್ಲ ಎಂದರು.

ಇಂದಿರಾ ಕ್ಯಾಂಟೀನ್ ಹೆಸರಲ್ಲಿ ಓಟ್ ಬ್ಯಾಂಕ್ ಗೆ ಕಾಂಗ್ರೆಸ್ ಮುಂದಾಗಿತ್ತು. ದೇಶದಲ್ಲಿ ಈಗಿರುವ ಕಾಂಗ್ರೆಸ್ ನಕಲಿ ಕಾಂಗ್ರೆಸ್. ನಕಲಿ ಗಾಂಧಿಗಳನ್ನ ಮೆಚ್ಚಿಸುವುದಕ್ಕೆ ಕಾಂಗ್ರೆಸ್ ನವರು ಈ ರೀತಿ ಸಾವರ್ಕರ್ ಬಗ್ಗೆ ಹಗುರವಾಗಿ ಮಾತನಾಡುತ್ತಿದ್ದಾರೆ ಎಂದರು.

Edited By : Manjunath H D
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

19/08/2022 05:15 pm

Cinque Terre

41.16 K

Cinque Terre

14

ಸಂಬಂಧಿತ ಸುದ್ದಿ