ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ಎಲ್ರೂ ಹೆಸರೂ ಎಲ್ಲ ಕಡೆ ಹಾಕಲು ಬರೋದಿಲ್ಲ: ಸಚಿವ ಆಚಾರ್

ಧಾರವಾಡ: ಸಿಎಂ ಜಾಹೀರಾತಿನಲ್ಲಿ ನೆಹರೂ ಫೋಟೋ ಕೈ ಬಿಟ್ಟ ವಿಚಾರಕ್ಕೆ ಸಂಬಂಧಿಸಿದಂತೆ ಧಾರವಾಡದಲ್ಲಿ ಗಣಿ, ಭೂವಿಜ್ಞಾನ ಹಾಗೂ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಹಾಲಪ್ಪ ಆಚಾರ್ ಪ್ರತಿಕ್ರಿಯೆ ನೀಡಿದ್ದಾರೆ.

ನೆಹರೂ ಅವರು ಗಾಂಧಿಯವರ ಜೊತೆ ಕೆಲಸ ಮಾಡಿದ್ದಾರೆ. ಎಲ್ಲರ ಹೆಸರನ್ನೂ ಎಲ್ಲ ಕಡೆ ಹೇಳಲು ಆಗುವುದಿಲ್ಲ ಗಾಂಧಿ ಹೆಸರು ಹೇಳಿದರೆ ಅಲ್ಲಿ ಎಲ್ಲರೂ ಬರುತ್ತಾರೆ. ಎಲ್ಲರ ಹೆಸರನ್ನು ಬೆರಳು ಮಾಡಿ ಹೇಳಲು ಆಗುವುದಿಲ್ಲ ಎಂದಿದ್ದಾರೆ.

ಉದ್ದೇಶಪೂರ್ವಕವಾಗಿ ನೆಹರೂ ಹೆಸರು ಕೈಬಿಟ್ಟಿದ್ದಾರೆಂಬ ಆರೋಪ ಮಾಡುವವರು ಮಾತನಾಡುತ್ತಲೇ ಇರುತ್ತಾರೆ.‌ ಅದಕ್ಕೇನು ಮಾಡಲು ಆಗುವುದಿಲ್ಲ ವೈಯಕ್ತಿಕವಾಗಿ ಒಬ್ಬೊಬ್ಬರನ್ನು ಅಳೆಯಲು ಆಗುವುದಿಲ್ಲ ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿದ ಎಲ್ಲರೂ ಮಹನೀಯರು ಎಲ್ಲರ ಹೆಸರು ಪಡೆಯಲು ಆಗುವುದಿಲ್ಲ ಒಬ್ಬೊಬ್ಬರನ್ನೇ ಗುರುತಿಸಿ ಆ ಪಕ್ಷದವರು ಈ ಪಕ್ಷದವರು ಅಂತಾ ಗುರುತಿಸಲು ಆಗೋದಿಲ್ಲ ಎಂದರು.

ಮಾಧುಸ್ವಾಮಿ ಸರ್ಕಾರದ ಬಗ್ಗೆ ಹೇಳಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ಅವರು ಯಾವ ಹಿನ್ನೆಲೆಯಲ್ಲಿ ಹೇಳಿದ್ದಾರೆ ಗೊತ್ತಿಲ್ಲ ಅವರ ಅಭಿಪ್ರಾಯಕ್ಕೆ ಅವರೇ ಪ್ರತಿಕ್ರಿಯೆ ನೀಡಬೇಕು. ಸರ್ಕಾರ ಸರಳ ಮತ್ತು ಸ್ಪಷ್ಟವಾಗಿದೆ.

Edited By : Manjunath H D
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

15/08/2022 02:14 pm

Cinque Terre

72.84 K

Cinque Terre

2

ಸಂಬಂಧಿತ ಸುದ್ದಿ