ಹುಬ್ಬಳ್ಳಿ: ವೀರ ಸಾವರ್ಕರ್ ಕುರಿತ ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆ ವಿಚಾರಕ್ಕೆ, ಸಿದ್ದರಾಮಯ್ಯಗೆ ಸಾವರ್ಕರ್ ಅವರ ಇತಿಹಾಸ ಗೊತ್ತಿಲ್ಲ. ಕೇವಲ ಅಲ್ಪಸಂಖ್ಯಾತರ ಓಲೈಕೆಗಾಗಿ ವೀರ ಸಾವರ್ಕರ್ ಬಗ್ಗೆ ಅವಹೇಳನವಾಗಿ ಮಾನಾಡುತ್ತಿದ್ದಾರೆ. ಇದು ಅವರ ಅವನತಿಗೆ ಕಾರಣವಾಗುತ್ತದೆ ಎಂದು ಮಾಜಿ ಸಿಎಂ ಜಗದೀಶ್ ಶೆಟ್ಟರ್ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವೀರ ಸಾವರ್ಕರ್ ಬ್ರಿಟಿಷರ ವಿರುದ್ಧ ಉಗ್ರವಾಗಿ ಹೋರಾಟ ಮಾಡಿದ್ದಕ್ಕೆ ಅವರನ್ನ ಜೈಲಿಗೆ ಹಾಕಲಾಗಿತ್ತು. ಇನ್ನು ನೆಹರು ಭಾವಚಿತ್ರವನ್ನ ಸರ್ಕಾರಿ ಜಾಹಿರಾತಿನಲ್ಲಿ ಕೈಬಿಟ್ಟ ವಿಚಾರಕ್ಕೆ, ಸರ್ಕಾರದ ಎಡವಟ್ಟಗೆ ಜಗದೀಶ್ ಶೆಟ್ಟರ್ ಹಾರಿಕೆ ಉತ್ತರ ನೀಡಿದ್ದಾರೆ. ಸಿಎಂ ಹಾಗೂ ಅಧಿಕಾರಿಗಳ ಮೇಲೆ ಹಾಕಿ ಶೆಟ್ಟರ್ ಜಾರಿಕೊಂಡದ್ದಾರೆ. ರಾಷ್ಟ್ರ ಧ್ವಜ ಸಂಹಿತೆಯಲ್ಲಿ ಖಾದಿಗೆ ಮಹತ್ವ ನೀಡಲಾಗಿದೆ. ಆದ್ರೆ ಕಾಂಗ್ರೆಸ್‌ನವರು ಸುಳ್ಳು ಆಪಾದನೆ ಮಾಡುವ ಮೂಲಕ ಟೀಕೆ ಮಾಡುವುದು ಸರಿಯಲ್ಲ.
ಖಾದಿಗೆ ಯಾವುದೇ ರೀತಿಯ ಮಹತ್ವ ಕಡಿಮೆಯಾಗದಂತೆ ಕೇಂದ್ರ ಸರ್ಕಾರ ವ್ಯವಸ್ಥೆ ಮಾಡುತ್ತಿದೆ. ಖಾದಿ ಮೇಲೆ ಅವಲಂಬನೆ ಇರುವಂತವರಿಗೆ ಯಾವುದೇ ತೊಂದರೆಯಾಗದಂತೆ ಕೇಂದ್ರ ಸರ್ಕಾರ ನೋಡಿಕೊಳ್ಳುತ್ತದೆ ಎಂದರು...
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
15/08/2022 02:06 pm