ಹುಬ್ಬಳ್ಳಿ: ಕೊಪ್ಪಳ ಜಿಲ್ಲೆಯ ಕನಕಗಿರಿ ತಾಲೂಕಿನ ಹುಲಿ ಹೈದರ್ ಗ್ರಾಮದಲ್ಲಿ ಕ್ಷುಲ್ಲಕ ವಿಚಾರಕ್ಕೇ ಗುಂಪು ಘರ್ಷಣೆಯಾಗಿ ಇಬ್ಬರ ಸಾವಿನ ವಿಚಾರಕ್ಕೇ ಸಂಬಂದಿಸಿದಂತೆ ಸಚಿವ ಹಾಲಪ್ಪ ಆಚಾರ್ ದೇಶಪಾಂಡೆ ನಗರದಲ್ಲಿ ಮಾತನಾಡಿದರು.
ಸಣ್ಣ ವಿಚಾರಕ್ಕೆ ಇಷ್ಟು ದೊಡ್ಡ ಗಲಾಟೆ ಮಾಡಿಕೊಂಡು ಇಬ್ಬರು ಅಮಾಯಕರು ಪ್ರಾಣ ಕಳೆದುಕೊಂಡಿದ್ದು ದುರಂತ. ನಮ್ಮ ಭಾಗದ ಜನರು ಶಾಂತಿಯನ್ನು ಕಾಪಾಡಬೇಕು. ಯಾರು ತಪ್ಪಿತಸ್ಥರು ಇದ್ದಾರೋ ಅಂತವರ ಮೇಲೆ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಲು ಪೊಲೀಸ್ ಇಲಾಖೆಗೆ ಸೂಚನೆಯನ್ನು ನೀಡಲಾಗಿದೆ.
ಸಣ್ಣ ವಿಚಾರ ಪ್ರಾಣ ಹೋಗುವಷ್ಟರ ಮಟ್ಟಿಗೆ ಹೋಗಿದ್ದು ಬೇಜಾರಿನ ಸಂಗತಿ. ಮುಂದಿನ ದಿನಮಾನಗಳಲ್ಲಿ ಇಂತಹ ಘಟನೆಗಳು ಆಗದ ರೀತಿಯಲ್ಲಿ ಮುನ್ನೆಚ್ಚರಿಕೆ ಕ್ರಮ ತೆಗೆದುಕೊಳ್ಳಲು ಸೂಚನೆ ನೀಡಲಾಗಿದೆ ಅಂತಾ ಮಾಧ್ಯಮಕ್ಕೆ ಹಾಲಪ್ಪ ಆಚಾರ್ ಪ್ರತಿಕ್ರಿಯೆ ನೀಡಿದರು.
ಸ್ಲಗ್: "ಕ್ಷುಲ್ಲಕ ವಿಚಾರ...ಇಬ್ಬರ ಪ್ರಾಣ ಹರಣ!"
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
11/08/2022 08:31 pm