ಹುಬ್ಬಳ್ಳಿ: ಕಾಂಗ್ರೆಸ್ ನವರಿಗೆ ನಮ್ಮಲ್ಲಿ ತಪ್ಪು ಹುಡುಕಲು ಏನು ಇಲ್ಲಾ. ಹೀಗಾಗಿ ಜನರ ಮಧ್ಯದಲ್ಲಿ ಇರುವ ದೃಷ್ಟಿಯಿಂದ ಸಿಎಂ ಬದಲಾವಣೆ ಬಗ್ಗೆ ಕಪೋಲಕಲ್ಪಿತ ಸುದ್ದಿ ಹರಡಿಸುತ್ತಿದ್ದಾರೆಂದು ಜಿಲ್ಲಾ ಉಸ್ತುವಾರಿ ಸಚಿವ ಹಾಲಪ್ಪ ಆಚಾರ್ ಹೇಳಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ನವರಿಗೆ ಸುಳ್ಳು ಹೇಳುವುದೇ ಕಾಯಕ. ನಮ್ಮ ತಪ್ಪುಗಳನ್ನು ಕಂಡು ಹಿಡಿದಿದ್ದರೆ ಒಪ್ಪಿಕೊಳ್ಳಬಹುದಿತ್ತು. ನಮ್ಮ ಮುಖ್ಯಮಂತ್ರಿ ಬಸವರಾಜ ಬೊಮ್ಮಯಿ ಅವರು ಉತ್ತಮ ಕೆಲಸ ಮಾಡುತ್ತಿದ್ದಾರೆ. ಆದರೆ ಹಲವು ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದಾರೆ. ಅವರನ್ನು ಬದಲಿಸುವ ಪ್ರಶ್ನೆಯೇ ಇಲ್ಲ. ಈ ಸರ್ಕಾರವು ಬಸವರಾಜ ಬೊಮ್ಮಾಯಿ ಅವರ ನೇತೃತ್ವದಲ್ಲಿ ಪೂರ್ಣಾವಧಿ ಆಡಳಿತ ನಡೆಸಲಿದೆ ಎಂದರು.
ಕಾಂಗ್ರೆಸ್ ನವರಿಗೆ ತಮ್ಮ ಬಳಿ ಜನ ಇದ್ದಾರೆ ಎಂಬುದನ್ನು ತೋರಿಸಿಕೊಳ್ಳಬೇಕಿತ್ತು. ಹಣ ಹಂಚಿದರೆ ಜನ ಸೇರುವುದಿಲ್ಲವೆ? ನಮ್ಮ ಪಕ್ಷ ಸಾಧನೆ ಮೇರೆಗೆ ಇಂತಹ ಹತ್ತು ಕಾರ್ಯಕ್ರಮ ಮಾಡಬಲ್ಲೆವು. ಅಮೃತ ಮಹೋತ್ಸವ ಡೋಂಗಿ ಎನ್ನುವ ಸಿದ್ದರಾಮಯ್ಯ ಹಳದಿ ಕಣ್ಣಿನಿಂದ ನೋಡುವುದು ಬಿಡಲಿ. ಅವರು ಈ ದೇಶದಲ್ಲಿ ಹುಟ್ಟಿಲ್ಲವೆ? ಎಂದರು.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
11/08/2022 04:04 pm