ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಸಮಾಜ ಸೇವೆಯಲ್ಲಿ ಗುರುತಿಸಿಕೊಂಡ ಯುವ ನಾಯಕ ರೆಹನಾ ರಜಾ ಐನಾಪುರಿ: ಜನ ಸೇವೆಗೆ ನಿಂತ ಜನನಾಯಕ

ಹುಬ್ಬಳ್ಳಿ: ಸಾಮಾಜಿಕ ಸೇವೆ ಮಾಡಲು ಹಾಗೂ ರಾಜಕೀಯ ಮೂಲಕ ಜನರ ಸೇವೆ ಮಾಡಲು ವಯಸ್ಸು ಮುಖ್ಯವಲ್ಲ. ಸೇವೆ ಮಾಡುವ ಮನಸ್ಸು ಮುಖ್ಯ ಎಂಬುವಂತ ಮಾತಿಗೆ ಹುಬ್ಬಳ್ಳಿಯಲ್ಲೊಬ್ಬ ಯುವಕ ತನ್ನ ವಯಸ್ಸಿಗೂ ಮೀರಿದ ಸಾಧನೆ ಹಾಗೂ ಸಾಮಾಜಿಕ ಕಾರ್ಯದ ಮೂಲಕ ಜನ ಸೇವೆಗೆ ಮುಂದಾಗಿದ್ದಾರೆ. ಈತನ ಕಾರ್ಯಕ್ಕೆ ಈಗ ಎಲ್ಲೆಡೆಯೂ ಪ್ರಶಂಸೆ ವ್ಯಕ್ತವಾಗುತ್ತಿದೆ.

ಹೌದು..ಹುಬ್ಬಳ್ಳಿಯ ಮುಲ್ಲಾ ಓಣಿಯ ರೆಹನಾ ರಜಾ ಐನಾಪುರಿ ಸಾಕಷ್ಟು ಕಾರ್ಯಗಳನ್ನು ಮಾಡುವ ಮೂಲಕ ಹೆಸರು ಮಾಡಿದ್ದಾರೆ. ಕಿರಿಯ ವಯಸ್ಸಿನಲ್ಲಿಯೇ ಹಿರಿಯ ಸಾಧನೆ ಮಾಡಿರುವ ಈ ಯುವಕ ಕಾಂಗ್ರೆಸ್ ಪಕ್ಷದ ಮೂಲಕವೇ ಸಾಕಷ್ಟು ಯೋಜನೆಗಳನ್ನು ಜನರ ಮನೆ ಬಾಗಿಲಿಗೆ ತಲುಪಿಸುವ ಕಾರ್ಯವನ್ನು ಮಾಡಿದ್ದಾರೆ. ಕೋವಿಡ್ ಸಂದರ್ಭದಲ್ಲಿ ಹಸಿದವರ ಕಣ್ಣೀರು ಒರೆಸುವ ಸದುದ್ದೇಶದಿಂದ ಸಾಕಷ್ಟು ಆಹಾರ ಕಿಟ್ ವಿತರಣೆ, ಕೊರೋನಾ ವಾರಿಯರ್ಸ್ ಗೆ ಫೇಸ್ ಶಿಲ್ಡ್, ಕೋವಿಡ್ ಕಿಟ್ ಹೀಗೆ ಮಹಾಮಾರಿ ಕೊರೋನಾ ವಿರುದ್ಧ ಹೋರಾಟ ಮಾಡುವ ಮೂಲಕ ಜನರಲ್ಲಿ ಜಾಗೃತಿ ಮೂಡಿಸಿ ಎಲ್ಲರ ಪ್ರೀತಿಗೆ ಪಾತ್ರರಾಗಿದ್ದಾರೆ.

ರೆಹನಾ ರಜಾ ಐನಾಪುರಿ ತಮ್ಮ ಕಿರಿಯ ವಯಸ್ಸಿನಲ್ಲೇ ಹಿರಿಯರು ಸಾಧಿಸಿದ ರೀತಿಯಲ್ಲಿ ಸಾಧನೆ ಮಾಡಿದ್ದು,ತಮ್ಮ ಬಡಾವಣೆ ಸೇರಿದಂತೆ ಹುಬ್ಬಳ್ಳಿಯಲ್ಲಿ ನೂರಾರು ಜನರನ್ನು ಕಾಂಗ್ರೆಸ್ ಪಕ್ಷಕ್ಕೆ ಕರೆತರುವ ಮೂಲಕ ಪಕ್ಷ ಸಂಘಟನೆಗೆ ಒತ್ತನ್ನು ನೀಡಿದ್ದಾರೆ. ಇನ್ನೂ ತಮ್ಮ ವಯಸ್ಸಿಗೂ ಮೀರಿದ ಸಾಧನೆಯ ಮೂಲಕ ಎಲ್ಲರ ಗಮನ ತನ್ನತ್ತ ಸೆಳೆಯುವಂತೆ ಮಾಡಿರುವ ಈ ಯುವಕ ನಿಜಕ್ಕೂ ಜನಮನ್ನಣೆ ಪಡೆದಿದ್ದಾನೆ.

ಇನ್ನೂ ವಿಶೇಷ ಅಂದರೆ ವಿಶ್ವವೇ ಕೋವಿಡ್ ಕಂಟಕದಲ್ಲಿದ್ದ ಸಂದರ್ಭದಲ್ಲಿ ಸ್ವತಃ ರೆಹನಾ ರಜಾ ಐನಾಪುರ ಅವರು ಸ್ವಂತ ಖರ್ಚಿನಲ್ಲಿಯೇ ಉಚಿತ ಅಂಬ್ಯುಲೆನ್ಸ್ ಸೇವೆ ಮೂಲಕ ಜನರಿಗೆ ಆರೋಗ್ಯವನ್ನು ಒದಗಿಸಿ ಎಲ್ಲರ ಮನೆಯ ಮಗನಾಗಿದ್ದಾನೆ. ಹೀಗೆ ಒಂದಲ್ಲ ಎರಡಲ್ಲ ಹತ್ತು ಹಲವಾರು ಕಾರ್ಯಗಳ ಮೂಲಕ ತಮ್ಮನ್ನು ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡಿರುವುದು ವಿಶೇಷವಾಗಿದೆ.

ಏಐಸಿಸಿ ಮುಖಂಡರಾದ ರಾಹುಲ್ ಗಾಂಧಿಯವರು ಹುಬ್ಬಳ್ಳಿಗೆ ಆಗಮಿಸಿದ ಸಂದರ್ಭದಲ್ಲಿ ಪ್ರೀತಿಯಿಂದ ಅಪ್ಪಿಕೊಂಡು ಸ್ವಾಗತಿಸುವ ಮೂಲಕ ತಮ್ಮ ಅಭಿಮಾನವನ್ನು ಪ್ರದರ್ಶಿಸಿದ್ದಾರೆ. ಒಟ್ಟಿನಲ್ಲಿ ರಾಜಕೀಯವನ್ನು ಒಂದು ಅಂಗವನ್ನಾಗಿ ಮಾಡಿಕೊಂಡು ಸಮಾಜ ಸೇವೆಯನ್ನು ಗುರಿಯಾಗಿಸಿಕೊಂಡ ಈ ಸಾಧಕ ಯುವಕ ಸೇವೆ ಮತ್ತಷ್ಟು ಜನರಿಗೆ ತಲುಪಬೇಕಿದೆ.

Edited By : Nagesh Gaonkar
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

10/08/2022 01:22 pm

Cinque Terre

51.47 K

Cinque Terre

5

ಸಂಬಂಧಿತ ಸುದ್ದಿ