ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ಈದ್ಗಾ ಯಾರ ಪಿತ್ರಾರ್ಜಿತ ಆಸ್ತಿಯೂ ಅಲ್ಲ: ಮುತಾಲಿಕ್

ಧಾರವಾಡ: ಚಾಮರಾಜಪೇಟೆ ಈದ್ಗಾ ಮೈದಾನದಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪನೆಗೆ ಅವಕಾಶ ಇಲ್ಲ ಎಂದು ಹೇಳಿರುವ ಶಾಸಕ ಜಮೀರ್ ಅಹ್ಮದ್ ಹೇಳಿಕೆಗೆ ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ ಮುತಾಲಿಕ್ ತಿರುಗೇಟು ನೀಡಿದ್ದಾರೆ.

ಧಾರವಾಡದಲ್ಲಿ ಮಾತನಾಡಿದ ಅವರು, ಈದ್ಗಾ ಮೈದಾನ ನಿಮ್ಮ ಆಸ್ತಿನೂ ಅಲ್ಲ, ನಿಮ್ಮ ಪಿತ್ರಾರ್ಜಿತ ಆಸ್ತಿನೂ ಅಲ್ಲ, ವಕ್ಫ್ ಬೋರ್ಡ್ಗರ ಸೇರಿದ್ದೂ ಅಲ್ಲ, ಮುಸ್ಲಿಂ, ಹಿಂದೂಗಳಿಗೆ ಸೇರಿದ್ದೂ ಅಲ್ಲ. ಅದು ಸರ್ಕಾರದ ಜಾಗ,ಸರ್ಕಾರಿ ಜಾಗದಲ್ಲಿ ನೀವು ನಮಾಜ್ ಮಾಡುತ್ತಾ ಬಂದಿದ್ದೀರಿ, ವಿಧಿ ವಿಧಾನದ ಮೂಲಕ ವರ್ಷಕ್ಕೆ 2 ಬಾರಿ ನಮಾಜ್ ಮಾಡುತ್ತಾ ಬಂದಿದ್ದೀರಿ, ಹಾಗಾದ್ರೆ ಗಣೇಶೋತ್ಸವಕ್ಕೆ ನಿಮ್ಮ ವಿರೋಧ ಯಾಕೆ ಎಂದು ಪ್ರಶ್ನಿಸಿದ್ದಾರೆ.

ಅಲ್ಲದೇ ನೀವು ಕೇವಲ ಮುಸ್ಲಿಂ ಓಟಿನ ಮೇಲೆ ಗೆದ್ದಿಲ್ಲ, ನೀವು ಮುಸ್ಲಿಂರಿಂದ ಮಾತ್ರ ಗೆದ್ದಿಲ್ಲ, ನೀವು ಮುಸ್ಲಿಂ ಎಂಎಲ್ಎ ಅಲ್ಲ, ನೀವು ಚಾಮರಾಜಪೇಟೆ ಶಾಸಕ, ನಿಮಗೆ ಹಿಂದೂಗಳೂ ಓಟು ಹಾಕಿದ್ದಾರೆ ನೆನೆಪಿಟ್ಟುಕೊಳ್ಳಿ. ಇನ್ನೊಮ್ಮೆ ನಿಮ್ಮಿಂದ ಇಂತಹ ಹೇಳಿಕೆ ಬರಬಾರದು ಅದನ್ನ ನೀವು ವಾಪಾಸ್ ಪಡೆಯಬೇಕು, ಹಿಂದೂಗಳಿಗೆ ಕ್ಷಮೆ ಕೇಳಬೇಕು ಎಂದು ಜಮೀರ್ ಅಹ್ಮದ್ಗೆ ಎಚ್ಚರಿಕೆ ನೀಡಿದ್ದಾರೆ.

ಅದೇ ಮೈದಾನದಲ್ಲಿ ಗಣೇಶೋತ್ಸವ ಆಚರಣೆ ಮಾಡುತ್ತೇವೆ. ತಾಕತ್ತಿದ್ದರೆ ಅದನ್ನು ವಿರೋಧಿಸಿ. ನಿಮ್ಮ ಈ ಹೇಳಿಕೆಯಿಂದ ಅಶಾಂತಿ ಮತ್ತು ಗಲಭೆ ಸೃಷ್ಠಿ ಮಾಡುತ್ತಿದ್ದೀರಿ. ಮುಂಬರುವ ಚುನಾವಣೆಯಲ್ಲಿ ಜಮೀರ್ ನನ್ನು ಹಿಂದೂಗಳು ಸೋಲಿಸಬೇಕು ಎಂದಿದ್ದಾರೆ.

Edited By : Nagesh Gaonkar
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

08/08/2022 03:48 pm

Cinque Terre

46.42 K

Cinque Terre

20

ಸಂಬಂಧಿತ ಸುದ್ದಿ