ಹುಬ್ಬಳ್ಳಿ: ಕಾಂಗ್ರೆಸ್ ಪಕ್ಷದಲ್ಲಿ ಒಂದಿಲ್ಲೊಂದು ರೀತಿಯಲ್ಲಿ ಭಿನ್ನಾಭಿಪ್ರಾಯ ಮೊಳಕೆಯೊಡೆಯುತ್ತಲೇ ಇದೆ. ರಾಹುಲ್ ಗಾಂಧಿ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಹೋಟೆಲ್ ನಲ್ಲಿ ಸಭೆ ಆಯೋಜಿಸಲಾಗಿದ್ದು, ಈ ಸಭೆಗೆ ಪ್ರವೇಶ ನೀಡದೇ ನಿರಾಕರಿಸಿದ ಹಿನ್ನೆಲೆಯಲ್ಲಿ ಮಾಜಿ ಶಾಸಕ ಎನ್.ಎಚ್.ಕೋನರೆಡ್ಡಿ ಅಸಮಾಧಾನಗೊಂಡಿದ್ದಾರೆ.
ಖಾಸಗಿ ಹೋಟೆಲ್ ನಲ್ಲಿ ರಾಹುಲ್ ಗಾಂಧಿ ನೇತೃತ್ವದಲ್ಲಿ ಸಭೆ ನಡೆಸಲಾಗುತ್ತಿದೆ. ಇದಕ್ಕೆ ಕೇವಲ ಕೆಲವು ಆಯ್ದ ಮುಖಂಡರಿಗೆ ಅನುಮತಿ ನೀಡಿದ್ದು, ಮಾಜಿ ಶಾಸಕರಂತಹ ನಾಯಕರನ್ನು ಹೊರಗೆ ಇಟ್ಟಿದ್ದು, ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಈ ಕುರಿತು ಪಬ್ಲಿಕ್ ನೆಕ್ಸ್ಟ್ ಜೊತೆಗೆ ಮಾತನಾಡಿದ ಎನ್.ಎಚ್.ಕೋನರೆಡ್ಡಿ ತಮ್ಮ ಮನದ ನೋವನ್ನು ಪರೋಕ್ಷವಾಗಿ ಹೊರಹಾಕಿದ್ದಾರೆ.
ಜಮೀರ್ ಅಹ್ಮದ್ ಅವರ ಕಾರನ್ನು ಒಳಗೆ ಕಳಿಸಿದ್ದೇನೆ. ಪ್ರೋಟೋಕಾಲ್ ಪ್ರಕಾರ ನನ್ನ ಹೆಸರು ಲಿಸ್ಟ್ ನಲ್ಲಿ ಇಲ್ಲ. ಆದ್ದರಿಂದ ಹೊರಟಿದ್ದೇನೆ ಎಂದು ಕೋನರೆಡ್ಡಿ ಹೇಳದೇ ಕೇಳದೇ ಹೊರಟು ಹೋಗಿದ್ದಾರೆ.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
02/08/2022 06:57 pm