ಹುಬ್ಬಳ್ಳಿ: ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ನಿಭಾಯಿಸುವಲ್ಲಿ ಸರಕಾರ ಸಂಪೂರ್ಣ ವಿಫಲವಾಗಿದೆ. ಕಾನೂನು ಸುವ್ಯವಸ್ಥೆ ವಿಫಲವಾಗಿದೆ ಅಂದ್ರೆ ಸಿಎಂ ವಿಫಲವಾಗಿದ್ದಾರೆ ಎಂದೇ ಅರ್ಥ. ಮೂವರು ಯುವಕರ ಪ್ರಾಣ ಉಳಿಸೋದಕ್ಕೆ ಸಾಧ್ಯವಾಗಲಿಲ್ಲ ಇವರಿಗೆ. ಇದರ ಜವಾಬ್ದಾರಿಯ ಹೊಣೆ ಸಿಎಂ ಹಾಗೂ ಗೃಹ ಸಚಿವರೇ ಹೊರಬೇಕೆಂದು ಮಾಜಿ ಸಿಎಂ, ವಿಪಕ್ಷ ನಾಯಕ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಿಮಗೆ ಯಾರಿಗೂ ರಕ್ಷಣೆ ನೀಡೋದಿಕ್ಕೆ ಆಗಲ್ಲ. ಸರ್ಕಾರ ವಿಫಲವಾಗಿದೆ ಎಂದು ನಾವು ಹೇಳೋದಲ್ಲ. ಅವರ ಪಕ್ಷದವರೇ ಹೇಳುತ್ತಿದ್ದಾರೆ, ಸಂಘ ಪರಿವಾರದವರೇ ಹೇಳುತ್ತಿದ್ದಾರೆ. ನಿಮಗೆ ರಕ್ಷಣೆ ನೀಡೋಕೆ ಆಗಲ್ಲವೆಂದ್ರೆ ರಾಜೀನಾಮೆ ಕೊಡಿ ಎಂದರು.
ಎಸ್ ಡಿಪಿಐ- ಪಿಎಫ್ ಐ ಪ್ರಚೋದನೆ ಕುರಿತು ಸಾಕ್ಷಿ ಇದ್ದರೆ ಅವರನ್ನು ಬ್ಯಾನ್ ಮಾಡಲಿ. ಬಿಜೆಪಿಯವರೇ ಆ ಸಂಘಟನೆಗಳನ್ನು ಸಾಕಿದ್ದಾರೆ. ಹತ್ಯೆಯಾದ ಯುವಕರ ಮನೆಗೆ ಸಿಎಂ ಭೇಟಿ ವಿಚಾರದ ಹಿನ್ನಲೆಯಲ್ಲಿ, ಸಿಎಂ ಕೇವಲ ಒಂದು ವರ್ಗದ ಮುಖ್ಯಮಂತ್ರಿಯಾಗಿದ್ದಾರೆ.
ಕೇವಲ ಒಂದು ವರ್ಗದ ಮನೆಗೆ ಸಿಎಂ ಭೇಟಿ ನೀಡೋದು ಎಷ್ಟರ ಮಟ್ಟಿಗೆ ಸರಿ? ನಾನು ಸಿಎಂ ಆಗಿದ್ದಾಗ ಎಲ್ಲ ವರ್ಗದ ಮನೆಗಳಿಗೂ ಭೇಟಿ ನೀಡಿದ್ದೇನೆ. ಪರಿಹಾರ ನೀಡಿದ್ರಲ್ಲೂ ಸಿಎಂ ತಾರತಮ್ಯ ಮಾಡುತ್ತಿದ್ದಾರೆ. ಇದನ್ನು ರಾಜಧರ್ಮ ಎನ್ನಲಾಗುತ್ತದೆಯಾ ? ರಾಜಧರ್ಮ ಅಂದ್ರೆ ಇದೇನಾ? ಎಂದು ಪ್ರಶ್ನಿಸಿದರು. ಜನರು ಚುನಾವಣೆಗಾಗಿ ಕಾಯುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಜನಾನೇ ಉತ್ತರಿಸುತ್ತಾರೆ ಎಂದರು.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
02/08/2022 06:30 pm