ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಪಾಲಿಕೆ ವಲಯದಲ್ಲಿ ಭ್ರಷ್ಟಾಚಾರ ಕಿಡಿ; ಸಾಮಾನ್ಯ ಸಭೆಯಲ್ಲಿ ಬಿಸಿ ಚರ್ಚೆ

ಹುಬ್ಬಳ್ಳಿ: ಹು-ಧಾ ಮಹಾನಗರ ಪಾಲಿಕೆಯ ಸಾಮಾನ್ಯ ಸಭೆ ಇಂದು‌ ಪಾಲಿಕೆ ಮೇಯರ್ ವೀರೇಶ ಅಂಚಟಗೇರಿ ನೇತೃತ್ವದಲ್ಲಿ ಪಾಲಿಕೆಯ ಕೇಂದ್ರ ಕಚೇರಿ ಸಭಾ ಭವನದಲ್ಲಿ ಜರುಗಿತು.

ಸಭೆಯಲ್ಲಿ ಸದಸ್ಯರು ಇ-ಸ್ವತ್ತು ಸೇರಿದಂತೆ ಹಲವು ವಿಷಯಗಳಲ್ಲಿ, ಸಂಬಂಧಿಸಿದ ಅಧಿಕಾರಿಗಳು ಸೂಕ್ತ ಕಾರ್ಯನಿರ್ವಹಣೆ ಮಾಡುವಲ್ಲಿ ವಿಫಲರಾಗಿದ್ದಾರೆ. ಅಲ್ಲದೆ, ಪಾಲಿಕೆ ವಲಯ ಕಚೇರಿಗಳಲ್ಲಿ ಭ್ರಷ್ಟಾಚಾರ ಹೆಚ್ಚಾಗಿವೆ. ಪ್ರತಿ ಕೆಲಸಕ್ಕೂ ಜನರಲ್ಲಿ ಹಣ ಕೇಳುತ್ತಿದ್ದಾರೆಂದು ಆರೋಪ ಕೇಳಿ ಬರುತ್ತಿವೆಂದು ಆರೋಪಿಸಿದರು.

ಇನ್ನು ಕೆಲ ಸದಸ್ಯರು ಹು-ಧಾ ಅಭಿವೃದ್ಧಿಗೆ ಸಂಬಂಧಿಸಿದಂತೆ ಹಣ ಕೊರತೆಯಿದ್ದು, ಪೌರಕಾರ್ಮಿಕರ ವೇತನ ಸರಿಯಾಗಿ ಆಗುತ್ತಿಲ್ಲ. ಅನೇಕ ಜನರಿಗೆ ವೇತನ ಇಲ್ಲದೇ ಪರದಾಡುವಂತಾಗಿದೆ ಎಂದರು. ಪಾಲಿಕೆಯಲ್ಲಿ ವಿಶೇಷವಾದ ಬಜೆಟ್ ಮಂಡನೆ ಮಾಡಬೇಕು. ಹು-ಧಾ ಮಹಾನಗರ ಅಭಿವೃದ್ಧಿಗೆ ಸಂಬಂಧಿಸಿ ಗಮನ ಹರಿಸಬೇಕು. ನಗರದಲ್ಲಿ ಭೂಗತ ಕೇಬಲ್‌ ಹಾವಳಿ ಹೆಚ್ಚಾಗಿವೆ. ಹೀಗೆ ಹಲವಾರು ವಿಷಯಗಳ ಬಗ್ಗೆ ಚರ್ಚಿಸಲಾಯಿತು.

ಪಾಲಿಕೆ ಸದಸ್ಯರ ಹೇಳಿಕೆಗಳನ್ನು ಮಹಾಪೌರರು ಆಲಿಸಿ, ಸೂಕ್ತ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದರು. ಆಯುಕ್ತ ಡಾ. ಗೋಪಾಲಕೃಷ್ಣ ಮಾತನಾಡಿ, ಜೋನಲ್ ಗಳಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ ಎಂಬ ಆರೋಪ ಕೇಳಿ ಬರುತ್ತಿದ್ದು, ಈ ಬಗ್ಗೆ ತನಿಖೆ ಮಾಡಿ ಕ್ರಮ ಕೈಗೊಳ್ಳಲಾಗುವುದು ಎಂದರು. ಉಪಮೇಯರ್ ಉಮಾ ಮುಕಂದ, ಪ್ರತಿಪಕ್ಷ ನಾಯಕ ದೊರಾಜ ಮನಕುಂಟ್ಲಾ, ಪಾಲಿಕೆ ಸದಸ್ಯರು, ಅಧಿಕಾರಿಗಳು ಉಪಸ್ಥಿತರಿದ್ದರು.

Edited By : Shivu K
Kshetra Samachara

Kshetra Samachara

29/07/2022 02:48 pm

Cinque Terre

15.45 K

Cinque Terre

0

ಸಂಬಂಧಿತ ಸುದ್ದಿ