ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಹಿಂದೂ ಯುವಕರ ಕೊಲೆಯನ್ನ ರಾಜಕೀಯವಾಗಿ ಬಳಸಿಕೊಳ್ಳುವುದೇ ಬಿಜೆಪಿಗರ ಕೆಲಸ: ಸತೀಶ ಜಾರಕಿಹೊಳಿ

ಹುಬ್ಬಳ್ಳಿ: ಸುಳ್ಯದ ಬಿಜೆಪಿ ಯುವ ಮೋರ್ಚಾ ಮುಖಂಡ ಪ್ರವೀಣ್ ಕೊಲೆಯನ್ನು ಬಿಜೆಪಿಯವರು ಗಲಭೆಗೆ ಬಳಕೆ ಮಾಡಿಕೊಳ್ಳದೆ ಇರುವುದು ಪುಣ್ಯ. ಯಾರೇ ಹಿಂದೂಗಳು ಸತ್ತರೂ ಬಿಜೆಪಿಯವರು ದೊಡ್ಡಮಟ್ಟದ ಗಲಾಟೆ, ಪ್ರತಿಭಟನೆ ಮಾಡುತ್ತಾರೆ. ಇದುವರೆಗೂ ಯಾವುದೇ ರೀತಿಯ ಗಲಾಟೆ ಮಾಡಿಲ್ಲ ಇದು ಪುಣ್ಯ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ವಾಗ್ದಾಳಿ ನಡೆಸಿದ್ದಾರೆ.

ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಯವರು ತಮಗೆ ಹೇಗೆ ಬೇಕೋ ಹಾಗೇ ಸಂದರ್ಭವನ್ನು ಬಳಕೆ ಮಾಡಿಕೊಳ್ಳುತ್ತಾರೆ. ಅವರು ಏನೂ ಕೆಲಸ ಮಾಡೋದಿಲ್ಲ. ಆದರೆ ಹಿಜಾಬ್, ಮುಸ್ಲಿಂ ಎಂದು ಬೇರೆಯವರ ಮೇಲೆ ಆರೋಪಗಳನ್ನು ಹೊರಿಸುವ ಕೆಲಸ ಮಾಡುತ್ತಾರೆ ಎಂದು ಆರೋಪಿಸಿದರು.

ಈ ಬಗ್ಗೆ ಸೂಕ್ತ ರೀತಿಯಲ್ಲಿ ತನಿಖೆ ನಡೆಯಲಿ. ಅದನ್ನು ಬಿಟ್ಟು ಅನಾವಶ್ಯಕವಾಗಿ ರಾಜಕೀಯ ಬಳಕೆ ಮಾಡಿಕೊಳ್ಳುವುದು ಸರಿಯಲ್ಲ ಎಂದರು.

Edited By : Nagesh Gaonkar
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

27/07/2022 05:55 pm

Cinque Terre

53.81 K

Cinque Terre

2

ಸಂಬಂಧಿತ ಸುದ್ದಿ