ಹುಬ್ಬಳ್ಳಿ: ಕೇಂದ್ರ ಸರ್ಕಾರ ಖಾದಿಯನ್ನು ಮುಚ್ಚುವಂತ ಕೆಲಸ ಮಾಡುತ್ತಿದೆ. ಅದಕ್ಕೆ ನನ್ನ ವಿರೋಧವಿದೆ. ಬೆಂಗೇರಿ ಖಾದಿ ಗ್ರಾಮೋದ್ಯೋಗಕ್ಕೆ ನಾನು ದೇಶ ಪ್ರೇಮ ಹಾಗೂ ಅಭಿಮಾನದಿಂದ ಬಂದಿದ್ದೇನೆಂದು ಮಾಜಿ ಸಚಿವೆ ಉಮಾಶ್ರೀ ಹೇಳಿದರು.
ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ಕಾರದ ಅವೈಜ್ಞಾನಿಕ ನಡೆಯಿಂದ ನೇಕಾರು ಸಂಕಷ್ಟಕ್ಕೆ ಸಿಲಕುವಂತಾಗಿದೆ. ರಾಷ್ಟ್ರ ಧ್ವಜಕ್ಕೆ ತನ್ನದೇ ಆದ ಮಾನ್ಯತೆ ಇದೆ. ಅದನ್ನೇ ಈ ಸರ್ಕಾರ ದೂರ ಮಾಡುತ್ತಿದೆ. ಈ ಖಾದಿ ಗ್ರಾಮೋದ್ಯೋಗಕ್ಕೆ ನಾನು ಹಲವಾರು ಬಾರಿ ಬಂದಿದ್ದೇನೆ. ವೇಷಭೂಷಣ ಯಾವುದು ಧರಿಸಲಿ ಆದ್ರೆ ಧ್ವಜ ಅಂತ ಬಂದಾಗ ಅದು ಖಾದಿಯಿಂದಲೆ ಆಗಬೇಕು. ರಾಜಕಾರಣಿಗಳ ಆಗಿರಬಹುದು, ಸರ್ಕಾರಿ ನೌಕರರು ಆಗಿರಬಹುದು, ಮನೆಯಲ್ಲಿ ಹಾರಾಡಿಸಬೇಕಾದರೆ ಅದು ಖಾದಿ ಇಂದಲೇ ತಯಾರಿಸಿದ ಧ್ವಜವಾಗಿರಬೇಕೆಂದು ಹೇಳಿದರು.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
27/07/2022 01:09 pm