ಕಲಘಟಗಿ: ಕಲಘಟಗಿ ಪಟ್ಟಣ ಪಂಚಾಯತ್ ಅಧ್ಯಕ್ಷ ಸ್ಥಾನದ ಬಗ್ಗೆ ಭುಗಿಲೆದ್ದಿದ್ದ ಧಗೆ ಈಗ ಇಬ್ಬರು ಬಿಜೆಪಿ ಸದಸ್ಯರ ಉಚ್ಚಾಟನೆಯಿಂದ ಶಮನಗೊಂಡಿದೆ.
ಇಂದು ಮುಂಜಾನೆ ಪಟ್ಟಣ ಪಂಚಾಯತ್ ನಲ್ಲಿ ಅಧ್ಯಕ್ಷ ಸ್ಥಾನಕ್ಕೆ ಅವಿಶ್ವಾಸ ತೋರಿದ ಇಬ್ಬರು ಬಿಜೆಪಿ ಸದಸ್ಯರಾದ ಅನಸೂಯಾ ಹೆಬ್ಬಳ್ಳಿಮಠ ಹಾಗೂ ಕಲ್ಮೆಶ ಬೆಣ್ಣಿ ಯವರು ಬೇರೆ ಪಕ್ಷಕ್ಕೆ ಕೈಜೋಡಿಸಿ ಬಿಜೆಪಿಗೆ ವಿಶ್ವಾಸದ್ರೋಹ ಬಗೆದಿರುವ ಕಾರಣ ಅವರಿಬ್ಬರನ್ನೂ ಪಕ್ಷದಿಂದ ಉಚ್ಚಾಟನೆ ಮಾಡಲಾಗಿದೆ ಎಂದು ಇಂದು ಮಧ್ಯಾಹ್ನ ಕಲಘಟಗಿ ಹನ್ನೆರಡು ಸಾವಿರ ಮಠದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ತಾಲೂಕು ಅಧ್ಯಕ್ಷ ಬಸವರಾಜ ಶೇರೆವಾಡ ತಿಳಿಸಿದರು.
ಈ ಸಂದರ್ಭದಲ್ಲಿ ಧಾರವಾಡ ಜಿಲ್ಲಾ ಗ್ರಾಮೀಣ ಅಧ್ಯಕ್ಷ ಬಸವರಾಜ ಕುಂದಗೋಳಮಠ ಹಾಗೂ ಪಕ್ಷದ ಮುಖಂಡರು ಉಪಸ್ಥಿತರಿದ್ದರು.
-ಉದಯ ಗೌಡರ, ಪಬ್ಲಿಕ್ ನೆಕ್ಸ್ಟ್ ಕಲಘಟಗಿ
Kshetra Samachara
25/07/2022 03:54 pm