ಹುಬ್ಬಳ್ಳಿ: ಉತ್ತರ ಕರ್ನಾಟಕ ಭಾಗದ ರೈತರ ಬಹು ವರ್ಷಗಳ ಬೇಡಿಕೆಯಾದ, ಕಳಸಾ ಬಂಡೂರಿ ಹಾಗೂ ಮಹದಾಯಿ ಯೋಜನೆ ಜಾರಿಗಾಗಿ ನಿರಂತರವಾಗಿ ಹೋರಾಟ ನಡೆಯುತ್ತಿದೆ.
ಆದ್ರೆ ಸರ್ಕಾರ ಮಾತ್ರ ರೈತರ ಮೂಗಿಗೆ ತುಪ್ಪ ಒರೆಸುವ ಕೆಲಸ ಮಾಡುತ್ತಿರುವ ಹಿನ್ನೆಲೆಯಲ್ಲಿ, ಮಹದಾಯಿ ಕಳಸಾ ಬಂಡೂರಿ, ರೈತ ಹೋರಾಟ ಒಕ್ಕೂಟದಿಂದ ಚಲೋ ಚಲೋ ದಿಲ್ಲಿ ಚಲೋ ಎಂಬ ಧ್ಯೇಯದೊಂದಿಗೆ ರೈತರು ರೈಲು ಮೂಲಕ ಕೇಂದ್ರ ಸರಕಾರಕ್ಕೆ ಎಚ್ಚರಿಕೆ ನೀಡಲು ದೆಹಲಿ ಪ್ರಯಾಣ ಬೆಳಸಿದ್ದಾರೆ.
ಹುಬ್ಬಳ್ಳಿ ಸಂಗೊಳ್ಳಿ ರಾಯಣ್ಣ ವೃತ್ತದಿಂದ ನೆಡೆಗೆ ಮೂಲಕ ರೇಲ್ವೆ ಸ್ಟೇಷನ್ ತಲುಪಿದ್ದಾರೆ.
Kshetra Samachara
25/07/2022 10:06 am