ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಸಿದ್ದರಾಮೋತ್ಸವ ಪೂರ್ವಭಾವಿ ಸಭೆಗೆ ಅಬ್ಬಯ್ಯ ಗೈರು: ಜಮೀರ್ ಗರಂ

ಹುಬ್ಬಳ್ಳಿ: ಸಿದ್ದರಾಮೋತ್ಸವ ಪೂರ್ವ ಭಾವಿ ಸಭೆಗೆ ಗೈರಾದ ಶಾಸಕ ಪ್ರಸಾದ್ ಅಬ್ಬಯ್ಯ ವಿರುದ್ಧ ಜಮೀರ್ ಅಹ್ಮದ್ ಖಾನ್ ಗರಂ ಆಗಿದ್ದಾರೆ. ಅಬ್ಬಯ್ಯ ವಿರುದ್ಧ ಬಹಿರಂಗ ಅಸಮಾಧಾನ ಹೊರ ಹಾಕಿದ್ದಾರೆ.

ಹುಬ್ಬಳ್ಳಿಯ ಕಚ್ಚಿ ಗಾರ್ಡನ್ ನಲ್ಲಿ ನಡೆ ಸಿದ್ಧರಾಮೋತ್ಸವದ ಪೂರ್ವಭಾವಿ ಸಭೆಯ ಭಾಷಣದಲ್ಲಿ ಅಸಮಾಧಾನ ಹೊರಹಾಕಿದ ಜಮೀರ್ ಅಹ್ಮದ್ ಖಾನ್, ಪ್ರಸಾದ ಅಬ್ಬಯ್ಯ ಮಗನಿಗೆ ಜ್ವರ ಬಂದಿದೆ ಅಂತೇಳಿ ಸಭೆಗೆ ಬಂದಿಲ್ಲ. ಜ್ವರ ಮಗನಿಗೆ ಬಂದಿದಿಯಾ ಅಥವಾ ಪ್ರಸಾದ್ ಅಬ್ಬಯ್ಯಗೆ ಬಂದಿದಿಯಾ ಎಂದು ಸಭೆಯಲ್ಲಿ ಬಹಿರಂಗವಾಗಿ ಕೇಳಿದರು.

ಅವರ ಕ್ಷೇತ್ರದಲ್ಲಿ ಅಲ್ಪ ಸಂಖ್ಯಾತರ ಮತ ನಿರ್ಣಾಯಕ ಇದನ್ನು ಅವರು ಮರೆಯದಿರಲಿ. ಅಬ್ಬಯ್ಯ ಯಾವತ್ತಾದರು ನಮ್ಮ ಬಳಿಗೆ ಬರಬೇಕು ಅವಾಗ ನಾನು ಮಾತನಾಡುವೆ. ಪ್ರಸಾದ್ ಅಬ್ಬಯ್ಯ ಅವರ ಮಗನಿಗೆ ಜ್ವರ ಬಂದಿದೆ ಅಂತ ಅವರು ಬಂದಿಲ್ಲ. ಎಲೆಕ್ಷನ್ ನಲ್ಲಿ ಜ್ವರ ಬಂದಿದ್ದರೆ ಬರ್ತಾ ಇದ್ದರೂ ಇಲ್ವೋ...? 1 ಲಕ್ಷ ಅಲ್ಪಂಖ್ಯಾತರು ಹುಬ್ಬಳ್ಳಿಯಲ್ಲಿ ಇದ್ದಾರೆ, ಅದಕ್ಕೆ ನಾವೆಲ್ಲರೂ ಒಂದಾಗಿ ಇರಬೇಕೆಂದು ಪರೋಕ್ಷವಾಗಿ ಅಬ್ಬಯ್ಯ ಅವರಿಗೆ ಟಾಂಗ್ ನೀಡಿದರು.

Edited By : Shivu K
Kshetra Samachara

Kshetra Samachara

25/07/2022 08:33 am

Cinque Terre

26.7 K

Cinque Terre

7

ಸಂಬಂಧಿತ ಸುದ್ದಿ