ಅಣ್ಣಿಗೇರಿ: ಭಾರತೀಯ ಜನತಾ ಪಾರ್ಟಿ ಅಣ್ಣಿಗೇರಿ ನಗರ ಘಟಕ ಹಾಗೂ ಆದಿವಾಸಿ ಹರಣಶಿಕಾರಿ ಸಮಾಜದ ವತಿಯಿಂದ ಭಾರತೀಯ ಜನತಾ ಪಾರ್ಟಿ ಹಾಗೂ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರಕ್ಕೆ ಕೃತಜ್ಞತೆ ಸಮಾರಂಭ ಹಾಗೂ ಭಾರತದ ರಾಷ್ಟ್ರಪತಿಯಾಗಿ ಆಯ್ಕೆಯಾದ ಆದಿವಾಸಿ ಸಮಾಜದ ದ್ರೌಪದಿ ಮುರ್ಮು ಅವರಿಗೆ ಅಭಿನಂದನಾ ಸಮಾರಂಭವನ್ನು ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸುವ ಮುಖಾಂತರ ಚಾಲನೆ ನೀಡಲಾಯಿತು.ಈ ವೇಳೆ ಸಚಿವರಾದ ಶಂಕರ್ ಪಾಟೀಲ್ ಮುನೇನಕೊಪ್ಪ ಅವರು ಮಾತನಾಡಿ ಆದಿವಾಸಿ ಜನಾಂಗದಲ್ಲಿ ಹುಟ್ಟಿದ ಒಬ್ಬ ಸಾಮಾನ್ಯ ಮಹಿಳೆ ಇವತ್ತು ಭಾರತದ ಉನ್ನತವಾದ ಸ್ಥಾನವನ್ನು ಪಡೆದಿರುವ ಅಂತಹ ಸಮಾಜ ಅದು ನನ್ನ ಆದಿವಾಸಿ ಸಮಾಜ ಅಂತ ಹೇಳಲಿಕ್ಕೆ ಬಯಸುತ್ತೇನೆ ಎಂದು ಮಾತನಾಡಿದರು. ಇನ್ನೂ ಹರಣಸಿಕಾರಿ ಸಮಾಜದ ಅಭಿವೃದ್ಧಿಗೆ 25 ಲಕ್ಷ ರೂಪಾಯಿಗಳನ್ನು ಘೋಷಣೆ ಮಾಡಿದರು.
ಈ ವೇಳೆ ಧಾರವಾಡ ಜಿಲ್ಲಾ ಗ್ರಾಮೀಣ ಅಧ್ಯಕ್ಷರಾದ ಬಸವರಾಜ ಕುಂದಗೋಳ ಮಠ, ಬಿಜೆಪಿ ರಾಜ್ಯ ರೈತ ಮೋರ್ಚಾ ಉಪಾಧ್ಯಕ್ಷರಾದ ಷಣ್ಮುಖ ಗುರಿಕಾರ, ಕರ್ನಾಟಕ ಆದಿವಾಸಿ ರಕ್ಷಣಾ ಪರಿಷತ್ ರಾಜ್ಯಾಧ್ಯಕ್ಷರಾದ ಎನ್ ಕೃಷ್ಣಯ್ಯ, ದಾಸೋ ಮಠದ ಶಿವಕುಮಾರ ಶ್ರೀಗಳು, ಶಿವಾನಂದ ಹೊಸಳ್ಳಿ, ಶಿವಯೋಗಿ ಸುರಕೋಡ,ರಾಘವೇಂದ್ರ ರಾಮಗಿರಿ, ಶೋಭಾ ಗೊಲ್ಲರ್ ಸೇರಿದಂತೆ ಆದಿವಾಸಿ ಸಮಾಜದ ಬಂಧುಗಳು ಹಾಗೂ ಬಿಜೆಪಿ ಪದಾಧಿಕಾರಿಗಳು ಮತ್ತು ಸಾರ್ವಜನಿಕರು ಉಪಸ್ಥಿತರಿದ್ದರು.
Kshetra Samachara
24/07/2022 10:35 pm