ಕುಂದಗೋಳ : ಜಲಜೀವನ ಮಿಷಿನ್ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಲು ಗ್ರಾಮಕ್ಕೆ ಆಗಮಿಸಿದ ಶಾಸಕರಿಗೆ ತಮ್ಮ ಓಣಿಯ ಅಭಿವೃದ್ಧಿ ಕೇಳಿ ಮಹಿಳೆಯೊಬ್ಬರು ಕಾಲಿಗೆ ಬೀಳಲು ಮುಂದಾದ ಘಟನೆ ಹಿರೇಗುಂಜಳ ಗ್ರಾಮದಲ್ಲಿ ನಿನ್ನೆ ನಡೆದಿದೆ.
ಹೌದು ! ಹಿರೇಗುಂಜಳ ಗ್ರಾಮದಲ್ಲಿ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಜೆಜೆಎಂ ಯೋಜನೆಯ ಭೂಮಿ ಪೂಜೆಗೆ ಆಗಮಿಸಿದ ಶಾಸಕಿ ಕಂಡ ಹಿರೇಗುಂಜಳ ಗ್ರಾಮದ ಗುಡ್ಡದ ಓಣಿಯ ಮಹಿಳೆ ನಮ್ಮ ವಾರ್ಡಿಗೆ ರಸ್ತೆ ಸೇರಿದಂತೆ ಮೂಲ ಸೌಕರ್ಯಗಳ ಸಮಸ್ಯೆ ಇದೆ ಎಂದು ಶಾಸಕರಿಗೆ ವಿವರಿಸುತ್ತಾ ಅಭಿವೃದ್ಧಿ ಮಾಡಿ ಕೊಡಿ ಎಂದು ಕಾಲಿಗೆ ಬೀಳಲು ಮುಂದಾಗುತ್ತಾರೆ ತಕ್ಷಣ ಶಾಸಕಿ ಅವರನ್ನು ಮೇಲೆತ್ತಿ ಅಭಿವೃದ್ಧಿ ಭರವಸೆ ನೀಡಿದ್ದಾರೆ.
ಶಾಸಕರನ್ನು ಕಂಡ ಮಹಿಳೆ ಅಂಗೈ ಹಿಡಿದು ಉದ್ವೇಗದಲ್ಲಿ ಸಮಸ್ಯೆ ಹೇಳ್ತಾ ಕಾಲಿಗೆ ಬೀಳಲು ಮುಂದಾಗುತ್ತಾರೆ ತಕ್ಷಣ ಶಾಸಕಿ ಪಂಚಾಯಿತಿಗೆ ಆಗಮಿಸಿ ಮಹಿಳೆ ಅಳಲನ್ನು ಸ್ವೀಕಾರ ಮಾಡಿ ಅವರ ವಾರ್ಡಿಗೆ ಭೇಟಿ ಸಮಸ್ಯೆ ಆಲಿಸಿದ್ದಾರೆ. ಒಟ್ಟಾರೆ ಒಬ್ಬ ಮಹಿಳೆ ಎಷ್ಟು ವರ್ಷಗಳಿಂದ ತಮ್ಮ ಓಣಿಯ ಮೂಲ ಸೌಕರ್ಯಗಳಿಂದ ಬೇಸತ್ತಿರಬಹುದು ಎಂಬುದಕ್ಕೆ ಈ ಘಟನೆ ಸಾಕ್ಷಿಯಾಗಿದೆ.
Kshetra Samachara
23/07/2022 04:27 pm