ಹುಬ್ಬಳ್ಳಿ: ಮಾಜಿ ಸ್ಪೀಕರ್ ರಮೇಶಕುಮಾರ್ ಹೇಳಿಕೆಯನ್ನ ನಾನು ಸಮರ್ಥಿಕೊಳ್ಳುತ್ತೇನೆ. ಗಾಂಧಿ ಕುಟುಂಬ ಅಷ್ಟು ದಿನ ಅಧಿಕಾರಿದಲ್ಲಿದ್ದರೂ ಅವರು ಏನೂ ಆಸ್ತಿ ಮಾಡಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಹೇಳಿದರು.
ನಗರದಲ್ಲಿಂದು ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ರಮೇಶ್‌ಕುಮಾರ್ ಹೇಳಿಕೆಯನ್ನು ತಿರುಚಲಾಗಿದೆ. ಅವರ ಉದ್ದೇಶ ಸರಿ ಇದೆ. ರಮೇಶ್ ಕುಮಾರ್ ತಪ್ಪು ಹೇಳಿಕೆ ನೀಡಿಲ್ಲ ಎಂದು ರಮೇಶಕುಮಾರ್ ಹೇಳಿಕೆ ಸಮರ್ಥನೆ ಮಾಡಿಕೊಂಡರು.
ಇನ್ನೂ ರಾಷ್ಟ್ರ ಧ್ವಜ ನೀತಿಯಿಂದ ಖಾದಿ ಗ್ರಾಮೋದ್ಯೋಗ ಸಂಕಷ್ಟಕ್ಕೆ ಸಿಲುಕುವ ಕುರಿತು ಮಾತನಾಡಿದ ಅವರು, ರಾಷ್ಟ್ರಧ್ವಜ ತಯಾರಿಕೆಯಲ್ಲಿ ಎಷ್ಟು ಧ್ವಜಗಳು ಸಿಗುತ್ತವೆಯೋ ಅವುಗಳನ್ನು ನಾವು ತೆಗೆದುಕೊಳ್ಳುತ್ತೆವೆ. ರಾಷ್ಟ್ರಧ್ವಜಗಳನ್ನು ನಮ್ಮ ಪಕ್ಷದ ವತಿಯಿಂದ ಖರೀದಿ ಮಾಡುತ್ತೆವೆ. ಖಾದಿ ಬಟ್ಟೆಗಳ ಜೊತೆಗೆ ಖಾದಿ ಗ್ರಾಮೋದ್ಯೋಗ ರಕ್ಷಣೆ ಮಾಡಬೇಕಿದೆ ಎಂದರು.
ಈಗಾಗಲೇ ರಾಹುಲ್ ಗಾಂಧಿಯವರು ಮಾಹಿತಿ ನೀಡಲು ಸೂಚನೆ ನೀಡಿದ್ದಾರೆ. ರಾಹುಲ್ ಗಾಂಧಿಯವರಿಗೆ ಈ ಸಂಭಂದಿಸಿದಂತೆ ಎರಡೂ ದಿನಗಳಲ್ಲಿ ವರದಿ ಸಲ್ಲಿಸುತ್ತೆನೆ ಎಂದು ಅವರು ಹೇಳಿದರು.
ಸಿದ್ಧರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಸಿಎಂ ವಿಚಾರವಾಗಿ ಕಿತ್ತಾಟ ನಡೆಸುತ್ತಿರುವ ವಿಷಯದ ಬಗ್ಗೆ ಮಾಧ್ಯಮದ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಅವರು, ಮುಖ್ಯಮಂತ್ರಿಗಳು ಯಾರ ಬೇಕಾದ್ರೂ ಆಗಬಹುದು. ಅವಕಾಶ ಸಿಕ್ಕರೆ ನೀವು ಆಗಬಹುದು. ನಮ್ಮಲ್ಲಿ ಯಾವುದೇ ಬಿರುಕುಗಳಿಲ್ಲ, ಎಲ್ಲವೂ ಮಾಧ್ಯಮಗಳ ಸೃಷ್ಟಿ. ನಾವೆಲ್ಲರೂ ಒಗ್ಗಟ್ಟಾಗಿದ್ದೇವೆ ಎಂದು ಅವರು ಚರ್ಚೆಗೆ ತೆರೆ ಎಳೆಯಲು ಮುಂದಾದರು.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
22/07/2022 07:27 pm