ನವಲಗುಂದ: ನ್ಯಾಯಾಧೀಕರಣ ತೀರ್ಪು ಕೊಟ್ಟರೂ, ಸರ್ಕಾರ ದುಡ್ಡನ್ನು ಮೀಸಲಿಟ್ಟರೂ ಕೂಡ ಮಹದಾಯಿ, ಕಳಸಾ ಬಂಡೂರಿ ಕೆಲಸ ಪ್ರಾರಂಭ ಆಗಿಲ್ಲ ಎಂದು ರೈತ ಹೋರಾಟಗಾರ ಸುಭಾಸ್ ಚಂದ್ರಗೌಡ ಪಾಟೀಲ ಹೇಳಿದ್ದಾರೆ.
ನವಲಗುಂದ ಪಟ್ಟಣದ ವೀರಗಲ್ಲಿಗೆ ಮಾಲಾರ್ಪಣೆ ಮಾಡಿ, ಮಾಧ್ಯಮದೊಂದಿಗೆ ಮಾತನಾಡಿದ ಅವರು ಸರ್ಕಾರದ ಮೇಲೆ ಹಲವು ಬಾರಿ ಒತ್ತಡ ಹಾಕಿದರೂ ಕಾರ್ಯರಂಭ ಆಗಿಲ್ಲ. ಹೀಗಾಗಿ ಇದೆ 24ಕ್ಕೆ ದಿಲ್ಲಿ ಚಲೋ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದೇವೆ. ಮತ್ತೊಂದು ಬಂಡಾಯ ಮಾಡಿಯಾದ್ರೂ ನಾವು ನೀರನ್ನು ಪಡದೇ ಪಡಿತೆವೆ ಎಂದು ರೈತ ಮುಖಂಡರಾದ ಸುಭಾಸ್ ಚಂದ್ರಗೌಡ ಪಾಟೀಲ ಸರ್ಕಾರದ ವಿರುದ್ಧ ಆಕ್ರೋಶ ಹೊರ ಹಾಕಿದರು.
Kshetra Samachara
21/07/2022 04:46 pm