ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಜಿಎಸ್ಟಿ ಹೆಸರಲ್ಲಿ ಜನಸಾಮಾನ್ಯರ ಪಿಕ್ ಪಾಕೆಟ್: ಕೇಂದ್ರ ಸರ್ಕಾರದ ವಿರುದ್ಧ ನಲ್ಪಾಡ್ ಅಸಮಾಧಾನ

ಹುಬ್ಬಳ್ಳಿ: ಜಿಎಸ್ ಟಿ ಹೆಸರಲ್ಲಿ ಸಾರ್ವಜನಿಕರ ಪಿಕ್ ಪ್ಯಾಕೆಟ್ ಮಾಡುವ ಕೆಲಸವನ್ನು ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಹಾಗೂ ಬೊಮ್ಮಾಯಿಯವರ ನೇತೃತ್ವದ ರಾಜ್ಯ ಸರ್ಕಾರ ಮಾಡುತ್ತಿದೆ ಎಂದು ರಾಜ್ಯ ಯುವ ಘಟಕದ ಕಾಂಗ್ರೆಸ್ ರಾಜ್ಯಾಧ್ಯಕ್ಷ ಮಹಮ್ಮದ್ ನಲ್ಪಾಡ್ ಆಕ್ರೋಶ ವ್ಯಕ್ತಪಡಿಸಿದರು.

ಜಿಎಸ್ಟಿ ಕುರಿತು ಪಬ್ಲಿಕ್ ನೆಕ್ಸ್ಟ್ ಜೊತೆಗೆ ಮಾತನಾಡಿದ ಅವರು, ಗಬ್ಬರ್ ಸಿಂಗ್ ಟ್ಯಾಕ್ಸ್ ಮತ್ತೆ ಬಂದಿದೆ. ಜನರ ಕಿಸೆ ಹೊಡೆಯುವ ತಂತ್ರಕ್ಕೆ ಬಿಜೆಪಿ ಸರ್ಕಾರ ಮುಂದಾಗಿದೆ. ಹಾಲು ಕುಡಿಯಲು ಟ್ಯಾಕ್ಸ್, ಮೊಸರು ಕುಡಿದರೂ ಟ್ಯಾಕ್ಸ್ ಇಂತಹ ನಿರ್ಧಾರದಿಂದ ಜನರು ಬೇಸತ್ತಿದ್ದಾರೆ ಎಂದರು.

ಐದಾರು ಸಾವಿರ ಸಂಬಳಕ್ಕೆ ದುಡಿಯುವ ಜನರು ಜೀವನ ನಿರ್ವಹಣೆ ಮಾಡುವುದೇ ಕಷ್ಟವಿದೆ. ಇಂತಹ ಸಂದರ್ಭದಲ್ಲಿಯೇ ಜಿ.ಎಸ್.ಟಿ ಹೆಸರಲ್ಲಿ ಜನರನ್ನು ಸುಲಿಗೆ ಮಾಡುವ ಕಾರ್ಯಕ್ಕೆ ಸರ್ಕಾರ ಮುಂದಾಗಿರುವುದು ನಿಜಕ್ಕೂ ವಿಪರ್ಯಾಸಕರ ಸಂಗತಿಯಾಗಿದೆ ಎಂದು ಅಸಮಾಧಾನ ಹೊರಹಾಕಿದರು.

Edited By : Shivu K
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

21/07/2022 12:35 pm

Cinque Terre

45.72 K

Cinque Terre

22

ಸಂಬಂಧಿತ ಸುದ್ದಿ