ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಇಬ್ಬರು ಸಿದ್ದುಗಳಿಂದ ಕಾಂಗ್ರೆಸ್ ಅವನತಿ ಆಗುತ್ತಿದೆ; ಮಾಜಿ ಸಿಎಂ ಶೆಟ್ಟರ್

ಹುಬ್ಬಳ್ಳಿ: ದೇಶದಲ್ಲಿ ಕಾಂಗ್ರೆಸ್ ಅವನತಿಗೆ ಇಬ್ಬರು ಸಿದ್ದುಗಳು ಕಾರಣ. ಒಬ್ಬರು ಪಂಜಾಬಿನ ಸಿದ್ದು ಮತ್ತೊಬ್ಬರು ರಾಜ್ಯದಲ್ಲಿನ ಸಿದ್ದು ಎಂದು ಮಾಜಿ ಸಿಎಂ ಜಗದೀಶ್ ಶೆಟ್ಟರ್ ಸಿದ್ದರಾಮಯ್ಯ ವಿರುದ್ಧ ಕಿಡಿಕಾರಿದರು.

ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮೋತ್ಸವ ಹೆಸರಿನಲ್ಲಿ ಹುಟ್ಟು ಹಬ್ಬ ಆಚರಣೆ ಮಾಡಲು ಹೊರಟಿದ್ದಾರೆ. ಇದುವೇ ಕಾಂಗ್ರೆಸ್‌ನವರಿಗೆ ದೊಡ್ಡ ವಿಷಯವಾಗಿದೆ.‌ ಕಾಂಗ್ರೆಸ್‌ನವರಿಗೆ ಜನರ ಸಮಸ್ಯೆಗಳು ಬೇಕಾಗಿಲ್ಲ. ಅವರಿಗೆ ಸಮಯವೂ ಇಲ್ಲ ಎಂದು ಹರಿಹಾಯ್ದರು.

ಸಿದ್ದರಾಮಯ್ಯ ಅವರ ಜನ್ಮದಿನವನ್ನು ಅದ್ದೂರಿಯಾಗಿ ಮಾಡುವುದು ಅವರಿಗೆ ಬಿಟ್ಟ ವಿಚಾರ, ಈ ಹಿಂದೆ ಸಿದ್ದರಾಮಯ್ಯ ಅವರು ಬಾದಾಮಿಯಿಂದ ಸಾವಿರ ಮತಗಳಿಂದ ಗೆದ್ದವರು. ಅಲ್ಲಿ ಏನಾದರೂ ಸೋತ್ತಿದ್ದರೇ ಅವರ ರಾಜಕೀಯ ಜೀವನವೇ ಇತಿಶ್ರೀ ಆಗತ್ತಾ ಇತ್ತು. ಅಲ್ಲಿ ಗೆದ್ದರು ಕೂಡ ಚಾಮುಂಡೇಶ್ವರಿಯಲ್ಲಿ 30 ಸಾವಿರ ಅಂತರದಿಂದ ಸೋಲು ಕಂಡಿದ್ದಾರೆ. ಇದೀಗ ಡಿ.ಕೆ.ಶಿವಕುಮಾರ ತಮಗೆ ಒಕ್ಕಲಿಗರ ಮತಗಳು ಬೀಳುತ್ತವೆ ನಾನು ಮುಖ್ಯಮಂತ್ರಿ ಆಗಬೇಕು ಎಂದು ಹೇಳಿದ್ದರೇ, ಇತ ಹಿಂದೂಳಿದ ವರ್ಗದವರ ಮತ ನನಗೆ ಬೀಳುತ್ತವೇ ಎಂದು ಸಿದ್ದರಾಮಯ್ಯ ಮುಖ್ಯಮಂತ್ರಿ ರೇಸ್ ನಲ್ಲಿದ್ದಾರೆ. ಇವರಿಬ್ಬರ ಒಳ ಹೋರಾಟದಿಂದಲೇ ಕಾಂಗ್ರೆಸ್‌ನ ಅವನತಿ ಪ್ರಾರಂಭ ಆಗಲಿದೆ ಎಂದರು.

ಸಿದ್ದರಾಮಯ್ಯ ಅವರಿಗೆ ಕ್ಷೇತ್ರದ ಮೇಲೆ ಭರವಸೆ ಇದ್ದರೆ ಬಾದಾಮಿಯಲ್ಲಿಯೇ ನಿಂತು ಗೆದ್ದು ತೋರಿಸಲಿ. ಅದು ಬಿಟ್ಟು ಬೇರೆ ಕಡೆಗೆ ಕ್ಷೇತ್ರ ಹುಡುಕುವುದು ಯಾಕೆ? ಅವರಿಗೆ ಸೋಲುವ ಭಯ ಕಾಡುತ್ತಿದೆ ಎಂದು ಸವಾಲು ಹಾಕಿದ್ದಾರೆ.

Edited By : Manjunath H D
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

20/07/2022 03:18 pm

Cinque Terre

91.68 K

Cinque Terre

24

ಸಂಬಂಧಿತ ಸುದ್ದಿ