ಹುಬ್ಬಳ್ಳಿ: ಅಕ್ರಮ ಸಿಲಿಂಡರ್ ರೀಫಿಲ್ಲಿಂಗ್ ಕರಾಳ ದಂಧೆಯನ್ನು ಬಂದ್ ಮಾಡಿಸುವಂತೆ, ಈಗಾಗಲೇ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಗೆ ಸೂಚಿಸಲಾಗಿದೆ ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಅಕ್ರಮವಾಗಿ ಸಿಲಿಂಡರ್ ರೀಫಿಲ್ಲಿಂಗ್ ದಂಧೆ ಹೆಚ್ಚಾಗುತ್ತಿದೆ. ಅದೆಷ್ಟೋ ಬಾರಿ ದಾಳಿ ಮಾಡಿದರು ಕೂಡ ಕಣ್ಮರೆಯಾಗಿ ರೀಫಿಲ್ಲಿಂಗ್ ದಂಧೆ ಮಾಡುತ್ತಿದ್ದಾರೆ ಆದ್ದರಿಂದ ಸಂಬಂಧಪಟ್ಟ ಅಧಿಕಾರಿಗಳಿಗೆ ಈ ಬಗ್ಗೆ ಕಡಿವಾಣ ಹಾಕಲು ಸೂಚಿಸಲಾಗಿದೆ ಎಂದರು.
Kshetra Samachara
16/07/2022 09:22 pm