ಹುಬ್ಬಳ್ಳಿ: ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆ ಬೆಂಗಳೂರು ಮತ್ತು ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆ ಹುಬ್ಬಳ್ಳಿ ಸಹಭಾಗಿತ್ವದಲ್ಲಿ ಇಂದು ಹುಬ್ಬಳ್ಳಿಯ ಖಾಸಗಿ ಹೊಟೇಲೊಂದರಲ್ಲಿ ರಾಜ್ಯಮಟ್ಟದ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಗಳ ಸಮ್ಮೇಳನ ಹಮ್ಮಿಕೊಂಡಿದ್ದರು.
ಈ ಸಮ್ಮೇಳನದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ, ಸಚಿವ ಬಿ.ಸಿ ಪಾಟೀಲ್, ಸಚಿವ ಮುರಗೇಶ ನಿರಾಣಿ, ಸಚಿವ ಶಂಕರಪಾಟೀಲ್ ಮುನೇನಕೊಪ್ಪ, ಶಾಸಕ ಅರವಿಂದ ಬೆಲ್ಲದ್, ಎಂಎಲ್‌ಸಿ ಬಸವರಾಜ ಹೊರಟ್ಟಿ, ಐಎಎಸ್ ಅಧಿಕಾರಿ ಇ.ವಿ ರಮಣ ರೆಡ್ಡಿ, ವಾಣಿಜ್ಯೋದ್ಯಮಿಗಳಾದ ಬಿ.ವಿ ಗೋಪಾಲ ರೆಡ್ಡಿ, ರಮೇಶ ಚಂದ್ರ ಲೋಹಟಿ ಸೇರಿದಂತೆ ಹಲವಾರು ಭಾಗಗಳಿಂದ ವಾಣಿಜ್ಯೋದ್ಯಮಿಗಳು ಆಗಮಿಸಿದ್ದರು.
Kshetra Samachara
16/07/2022 01:25 pm