ಹುಬ್ಬಳ್ಳಿ: ಸಿದ್ದರಾಮೋತ್ಸವ ಮಾಡುವುದರಿಂದ ಬಿಜೆಪಿಗೆ ಯಾವುದೇ ರೀತಿಯಲ್ಲಿ ಎಫೆಕ್ಟ್ ಆಗುವುದಿಲ್ಲ. ಅದು ಕಾಂಗ್ರೆಸ್ ಆಂತರಿಕ ವಲಯದಲ್ಲಿ ಶಕ್ತಿ ಮಹೋತ್ಸವ ಮಾಡಿಕೊಂಡು ಹಾಳಾಗಲಿ ಎಂದು ಮಾಜಿ ಸಿಎಂ ಜಗದೀಶ್ ಶೆಟ್ಟರ್ ಸಿದ್ದರಾಮೋತ್ಸವದ ಬಗ್ಗೆ ಅಪಹಾಸ್ಯ ಮಾಡಿದ್ದಾರೆ.
ನಗರದಲ್ಲಿಂದು ಮಾಧ್ಯಮದ ಜೊತೆಗೆ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷಕ್ಕೆ ಈಗಾಗಲೇ ನಡುಕ ಸ್ಟಾರ್ಟ್ ಆಗಿದೆ. ಒಂದೇ ರೀತಿಯ ನಿರ್ಧಾರ ಕಾಂಗ್ರೆಸ್ ಪಕ್ಷದಲ್ಲಿ ಇಲ್ಲ. ಅವರಲ್ಲಿಯೇ ಕಿತ್ತಾಟ ಆರಂಭವಾಗಿದೆ. ಇದರಿಂದ ಯಾವುದೇ ಹಾನಿ ಬಿಜೆಪಿಗೆ ಇಲ್ಲ ಎಂದರು.
ಕಾಂಗ್ರೆಸ್ ಪಕ್ಷಕ್ಕೆ ನಡುಕ ಹುಟ್ಟಿದೆ. ಯಾವುದೇ ರೀತಿಯಲ್ಲಿ ಉತ್ಸವ ಮಾಡಿದರೂ ಕೂಡ ನಮ್ಮ ಅಸ್ತಿತ್ವ ಉಳಿಯಲ್ಲ ಎಂದು ಈಗಾಗಲೇ ಆತಂಕ ಸೃಷ್ಟಿಯಾಗಿದೆ. ಈ ಬಗ್ಗೆ ನಾವು ತಲೆ ಕೆಡಿಸಿಕೊಳ್ಳಲ್ಲ. ಈ ಬಗ್ಗೆ ಅವರೇ ಉತ್ತರ ಕೊಡಬೇಕು ಎಂದು ಜಗದೀಶ್ ಶೆಟ್ಟರ್ ಹೇಳಿದ್ರು.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
14/07/2022 06:13 pm