ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಪದೇ ಪದೇ ಬಿ.ಆರ್. ಅಂಬೇಡ್ಕರ್ ಗೆ ಅಪಮಾನ: ಜುಲೈ 8 ಕ್ಕೆ ಉಪವಾಸ ಸತ್ಯಾಗ್ರಹ

ಹುಬ್ಬಳ್ಳಿ: ಸಂವಿಧಾನ‌ ಶಿಲ್ಪಿ ಬಿ.ಆರ್. ಅಂಬೇಡ್ಕರ್ ಅವರಿಗೆ ಪದೇ ಪದೇ ಅಪಮಾನ ಮಾಡಲಾಗುತ್ತಿದ್ದು, ಇದನ್ನು ಖಂಡಿಸಿ ಜು.8 ರಂದು ಉಪವಾಸ ಸತ್ಯಾಗ್ರಹ ನಗರದ ಅಂಬೇಡ್ಕರ್ ಮೂರ್ತಿ ಹತ್ತಿರ ಮಾಡಲಾಗುತ್ತಿದೆ ಎಂದು ಸಮಾಜ ಸೇವಕ ಲಕ್ಷ್ಮಣ ರೋಖಾ ಹೇಳಿದರು.

ನಗರದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಶ್ವಕ್ಕೆ ಮಾದರಿ ಸಂವಿಧಾನ‌ ನೀಡಿದ ಮಹಾನ್ ವ್ಯಕ್ತಿಯ ಕುರಿತು ರಾಜಕಾರಣಿಗಳು, ಕಿಡಿಗೇಡಿಗಳು ಅಪಮಾನ ಮಾಡುತ್ತಿದ್ದಾರೆ. ಇದರಿಂದ‌ ಅಂಬೇಡ್ಕರ್ ಅವರ ಅಭಿಮಾನಿಗಳಿಗೆ ನೋವುಂಟಾಗಿದೆ ಎಂದು ತಿಳಿಸಿದರು.

ಪ್ರಸ್ತುತ ವಿದ್ಯಾರ್ಥಿಗಳಿಗೆ ಅಂಬೇಡ್ಕರ್ ಅವರ ಬಗ್ಗೆ ಅರಿವು ಮೂಡಿಸುವ ಉದ್ದೇಶದಿಂದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಅವರ‌ ಕುರಿತು ವಸ್ತು ಸಂಗ್ರಹಾಲಯ ಆರಂಭಿಸಬೇಕು ಎಂದು ಆಗ್ರಹಿಸಿದರು. ಈ ಬಗ್ಗೆ ತಹಶೀಲ್ದಾರ್ ಗೆ ಮನವಿ ಸಲ್ಲಿಸಲಾಗುತ್ತದೆ ಎಂದರು.

Edited By : Nagesh Gaonkar
Kshetra Samachara

Kshetra Samachara

07/07/2022 06:37 pm

Cinque Terre

24.25 K

Cinque Terre

1

ಸಂಬಂಧಿತ ಸುದ್ದಿ