ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಗೋಳ: ಗ್ರಾಮ ಪಂಚಾಯಿತಿ ಸದಸ್ಯರ ವಿಧಾನಸಭೆ-ಕುಸುಮಾವತಿ

ಕುಂದಗೋಳ: ಮಾಜಿ ಸಚಿವ ದಿವಂಗತ ಸಿ.ಎಸ್ ಶಿವಳ್ಳಿ ಶರೇವಾಡ ಗ್ರಾಮ ಪಂಚಾಯಿತಿ ಕಟ್ಟಡಕ್ಕೆ ಭೂಮಿಪೂಜೆ ಸಲ್ಲಿಸಿದ್ದರು. ಇಂದು ನಾನು ಈ ಕಟ್ಟಡ ಉದ್ಘಾಟನೆ ಮಾಡುತ್ತಿರುವುದು ಸಂತಸ ತಂದಿದೆ ಎಂದು ಶಾಸಕಿ ಕುಸುಮಾವತಿ ಶಿವಳ್ಳಿ ಹೇಳಿದರು.

ಅವರು ಕುಂದಗೋಳ ಮತಕ್ಷೇತ್ರದ ಶರೇವಾಡ ಗ್ರಾಮದ ನೂತನ ಗ್ರಾಮ ಪಂಚಾಯಿತಿ ಕಟ್ಟಡವನ್ನು ರಿಬ್ಬನ್ ಕತ್ತರಿಸಿ, ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿ ಶಾಸಕರಿಗೆ ವಿಧಾನಸಭೆ ಹೇಗೆ ಇದೆಯೊ, ಹಾಗೇ ಗ್ರಾಮ ಪಂಚಾಯಿತಿ ಸದಸ್ಯರಿಗೆ ಗ್ರಾಮ ಪಂಚಾಯಿತಿಯೇ ವಿಧಾನಸಭೆಯಾಗಿದೆ, ಇದನ್ನು ಅಚ್ಚುಕಟ್ಟಾಗಿ ನಿರ್ವಹಿಸುವುದು ನಿಮ್ಮೆಲ್ಲರ ಜವಾಬ್ದಾರಿ ಎಂದರು.

ಬಳಿಕ ಗೋಮಾತೆಯನ್ನು ನೂತನ ಗ್ರಾಮ ಪಂಚಾಯಿತಿ ಒಳಗೆ ಪೂಜೆ ಮಾಡಿ ಬರಮಾಡಿಕೊಳ್ಳಲಾಯಿತು, ಶಾಸಕಿ ಕುಸುಮಾವತಿ ಶಿವಳ್ಳಿ ಸಂಪೂರ್ಣ ಗ್ರಾಮ ಪಂಚಾಯಿತಿ ಕಟ್ಟಡ ವೀಕ್ಷಿಸಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಉಪಾಧ್ಯಕ್ಷರು ಹಾಗೂ ಸರ್ವ ಸದಸ್ಯರ ಜೊತೆ ಅಭಿವೃದ್ಧಿ ಚರ್ಚೆ ನಡೆಸಿದರು.

ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಶಿವಾನಂದ ಉಳ್ಳೇಗಡ್ಡಿ, ಉಪಾಧ್ಯಕ್ಷರಾದ ಶ್ರಿಮತಿ ಅಮಟೂರ ಹಾಗೂ ಸರ್ವ ಸದಸ್ಯರು ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಉಪ‌ಸ್ಥಿತರಿದ್ದರು.

Edited By : Nagesh Gaonkar
Kshetra Samachara

Kshetra Samachara

06/07/2022 09:53 pm

Cinque Terre

131.21 K

Cinque Terre

0

ಸಂಬಂಧಿತ ಸುದ್ದಿ