ಕಲಘಟಗಿ: ತಾಲೂಕಿನಲ್ಲಿ ಕಾಂಗ್ರೆಸ್ ಮುಖಂಡರು ಹಾಗೂ ಮಾಜಿ ವಿಧಾನ ಪರಿಷತ್ ಸದಸ್ಯರಾದ ನಾಗರಾಜ ಛಬ್ಬಿಯವರು ಮುಂದಿನ ಕಲಘಟಗಿ ಮತಕ್ಷೇತ್ರದ ವಿಧಾನಸಭಾ ಚುನಾವಣೆಯಲ್ಲಿ ಭಾಗವಹಿಸುವುದಾಗಿ ತಿಳಿಸಿದ್ದರು.
ಕಲಘಟಗಿ ಮತ್ತು ಅಳ್ನಾವರ ಭಾಗದಲ್ಲಿ ಪಕ್ಷದ ಸಂಘಟನೆ ಹಾಗೂ ಚುನಾವಣೆ ನಿಲ್ಲುವುದರ ಬಗ್ಗೆ ಕಳೆದ ವರ್ಷ ಪ್ರಚಾರ ಬಹಳ ಜೋರಾಗಿ ನಡೆಸಿದ್ದರು. ಆದರೆ ಇತ್ತಿಚೆಗೆ ಕೆಲವು ತಿಂಗಳುಗಳಿಂದ ನಾಗರಾಜ ಛಬ್ಬಿಯವರು ಕ್ಷೇತ್ರಕ್ಕೆ ಬರದೆ ಇರುವುದು ನೋಡಿದರೆ ತಾವು ಈ ಚುನಾವಣೆಯಿಂದ ಹಿಂದೆ ಸರದಿದ್ದಾರಾ ಎಂಬ ಅನುಮಾನಗಳು ಹುಟ್ಟುಹಾಕುತ್ತಿವೆ.
ಈ ಕ್ಷೇತ್ರದಲ್ಲಿ ಟಿಕೆಟ್ ಗಾಗಿ ಒಂದೆ ಪಕ್ಷದಿಂದ ಸಂತೋಷ ಲಾಡ್ ಹಾಗೂ ನಾಗರಾಜ ಛಬ್ಬಿ ಇಬ್ಬರು ನಾಯಕರು ಪೈಪೋಟಿ ನಡೆಸುತ್ತಿದ್ದಾರೆ ಆದರೆ ಕ್ಷೇತ್ರದಲ್ಲಿ ಮಾತ್ರ ಈ ಇಬ್ಬರು ಸಿಗದೆ ಇರೋದು ವಿಪರ್ಯಾಸ ವಾಗಿದೆ ಚುನಾವಣೆ ಮುಂಚೆನೆ ತಿರುಗಿ ನೋಡದವರು ಇನ್ನು ಚುನಾವಣೆ ಗೆದ್ದ ನಂತರ ಇವರು ತಿರುಗಿ ನೋಡುತ್ತಾರಾ ಎಂಬ ಪ್ರಶ್ನೆ ಕ್ಷೇತ್ರದ ಜನರಲ್ಲಿ ಅನುಮಾನ ಹುಟ್ಟಿಸಿದ್ದಂತು ಸತ್ಯವಾಗಿದೆ.
ವರದಿ: ಉದಯ ಗೌಡರ
Kshetra Samachara
05/07/2022 04:58 pm