ಕಲಘಟಗಿ: ಪಟ್ಟಣ ಪಂಚಾಯತ್ ಅಧ್ಯಕ್ಷರು ತಮ್ಮ ಅವಧಿ ಮುಗಿದರು ರಾಜೀನಾಮೆ ನೀಡದ ಕಾರಣ ಗುರುವಾರ ಸಾಮಾನ್ಯ ಸಭೆಗೆ ಆಡಳಿತ ಪಕ್ಷದ ಸದ್ಯಸರು ಗೈರಾದ ಘಟನೆ ನಡೆದಿದೆ.
ಪಟ್ಟಣ ಪಂಚಾಯತ್ ಚುನಾವಣೆ ಮುಗಿದ ನಂತರ ಪಕ್ಷದ ವರಿಷ್ಠರ ಆದೇಶದ ಮೇರೆಗೆ ಅಧ್ಯಕ್ಷರ ಅವಧಿ 15 ತಿಂಗಳು ಒಬ್ಬರಿಗೆ ನಿಗದಿಯಾಗಿದ್ದು, ಸದ್ಯದ ಹಾಲಿ ಅಧ್ಯಕ್ಷೆ ಅನಸೂಯಾ ಹೆಬ್ಬಳ್ಳಿಮಠ 18 ತಿಂಗಳು ಮುಗಿಯುತಾ ಬಂದರೂ ರಾಜೀನಾಮೆ ನೀಡದಿರುವುದರಿಂದ ಪಕ್ಷದ ಸದ್ಯಸರು ಆಕ್ರೋಶಗೊಂಡಿದ್ದು,ಸಾಮಾನ್ಯ ಸಭೆಗೆ ಗೈರು ಆಗುವ ಮೂಲಕ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಈ ಗಾಗಲೆ ಉಪಾಧ್ಯಕ್ಷ ಸ್ಥಾನಕ್ಕೆ ಯಲ್ಲವ್ವ ಶಿಗ್ಲಿ ಯವರು ರಾಜೀನಾಮೆ ನೀಡಿದ್ದು ಮುಂದಿನ ದಿನಮಾನಗಳಲ್ಲಿ ಯಾವ ರೀತಿ ಬದಲಾವಣೆ ಯಾಗಲಿದೆ ಎಂದು ಕಾದು ನೋಡಬೇಕಾಗಿದೆ.
ವರದಿ: ಉದಯ ಗೌಡರ
Kshetra Samachara
02/07/2022 06:39 pm