ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಮಹಾರಾಷ್ಟ್ರ ಬಿಕ್ಕಟ್ಟಿಗೆ ಬಿಜೆಪಿಯೇ ಕಾರಣ; ಶಿವಸೇನೆ ರಾಜ್ಯಾಧ್ಯಕ್ಷ ಹಕಾರೆ ಗುಟುರು

ಹುಬ್ಬಳ್ಳಿ: ಮಹಾರಾಷ್ಟ್ರದಲ್ಲಿ ಎದುರಾಗಿರುವ ರಾಜಕೀಯ ಬಿಕ್ಕಟ್ಟಿಗೆ ಬಿಜೆಪಿಯೇ ಕಾರಣ. ಅವರು ಅಧಿಕಾರವನ್ನು ಹಿಡಿಯಬೇಕೆಂಬ ಒಂದೇ ಒಂದು ಹಪಾಹಪಿಯಿಂದ ಈ ಕೆಲಸ ಮಾಡುತ್ತಿದ್ದಾರೆ. ಅವರು ಮುಂದಿನ ದಿನಗಳಲ್ಲಿ ಎದುರೇಟು ಅನುಭವಿಸುತ್ತಾರೆ ಎಂದು ಶಿವಸೇನೆ ರಾಜ್ಯಾಧ್ಯಕ್ಷ ಕುಮಾರ ಹಕಾರೆ ಹೇಳಿದರು.

ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಹಾರಾಷ್ಟ್ರದಲ್ಲಿ ಉಂಟಾದ ರಾಜಕೀಯ ಗೊಂದಲದ ಹಿಂದಿನ ಗುಂಡು ಮತ್ತು ಬಂದೂಕು ಒಬ್ಬರದೇ, ಅವರು ಇಡೀ ದೇಶವನ್ನು ಆಳುತ್ತಿದ್ದಾರೆ. ಇದೀಗ ಮಹಾರಾಷ್ಟ್ರಕ್ಕೂ ಎಂಟ್ರಿ ಕೊಟ್ಟಿದ್ದು, ಹಿಂದುತ್ವ ಹೊಂದಿರುವ ಪಕ್ಷದ ನೈತಿಕತೆಯನ್ನು ಕುಗ್ಗಿಸುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಬಿಜೆಪಿ ವಿರುದ್ಧ ಹರಿಹಾಯ್ದರು.

ಮಹಾರಾಷ್ಟ್ರದಲ್ಲಿ ರಾಜಕೀಯ ಗೊಂದಲ ಸೃಷ್ಟಿಸಿರುವುದು ಒಳ್ಳೆಯದಲ್ಲ. ಮುಂದಿನ ದಿನಗಳಲ್ಲಿ ನಮ್ಮ ಪಕ್ಷದ ಸರ್ಕಾರವೇ ಮಹಾರಾಷ್ಟ್ರದಲ್ಲಿರುತ್ತದೆ. ನಮ್ಮವರೇ ಮುಖ್ಯಮಂತ್ರಿ ಆಗಿರುತ್ತಾರೆ. ಇದೀಗ ಸೃಷ್ಟಿಯಾಗಿರುವ ಗೊಂದಲ ಶನಿವಾರ ನಿವಾರಣೆ ಆಗಲಿದೆ ಎಂದು ಹಕಾರೆ ತಿಳಿಸಿದರು.

ಉದ್ಭವ್ ಠಾಕ್ರೆ ಯಾವತ್ತೂ ಅಧಿಕಾರವನ್ನು ಬಯಸಿದವರಲ್ಲ, ಎಲ್ಲರ ಒತ್ತಾಯಕ್ಕೆ ಮಣಿದು ಸಿಎಂ ಆಗಿದ್ದರು. ಆದರೆ, ಇದೀಗ ರಾಜಕೀಯ ಬಿಕ್ಕಟ್ಟಿನಿಂದ ಏಕನಾಥ ಶಿಂಧೆ ಸಿಎಂ ಆಗಬಹುದು. ರಾಜಕೀಯದಲ್ಲಿ ಸ್ಥಾನಪಲ್ಲಟ ಸಾಮಾನ್ಯ ಎಂದರು.

Edited By : Manjunath H D
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

23/06/2022 07:50 pm

Cinque Terre

136.17 K

Cinque Terre

7

ಸಂಬಂಧಿತ ಸುದ್ದಿ