ಹುಬ್ಬಳ್ಳಿ; ಕೇಂದ್ರ ಸರ್ಕಾರದ ನೇತೃತ್ವದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಘೋಷಣೆ ಮಾಡಿರುವ ಅಗ್ನಿಪಥ ಯೋಜನೆ ದೇಶದಲ್ಲಿ ಉದ್ಯೋಗ ನೀಡುವ ಹೆಸರಲ್ಲಿ ದೇಶಕ್ಕೆ ಬೆಂಕಿ ಹಾಕುವ ಕಾರ್ಯಕ್ಕೆ ಮುಂದಾಗಿದೆ. ಈ ನಿರ್ಧಾರವನ್ನು ಕೈ ಬಿಡಬೇಕು ಎಂದು ಕೆಪಿಸಿಸಿ ಮಾಧ್ಯಮ ವಿಶ್ಲೇಷಕ ಪಿ.ಎಚ್. ನೀರಲಕೇರಿ ಆಗ್ರಹಿಸಿದ್ದಾರೆ.
ನಗರದಲ್ಲಿಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, 1954ರ ನೇಮಕಾತಿ ತಿದ್ದುಪಡಿ ಹಿನ್ನೆಲೆಯಲ್ಲಿ ಖಾಲಿ ಇರುವ ಲಕ್ಷಾಂತರ ಹುದ್ದೆಗಳಿಗೆ ನೇಮಕಾತಿ ಮಾಡಬೇಕು ಅದನ್ನು ಬಿಟ್ಟು, ಅಗ್ನಿಪಥ ಹೆಸರಲ್ಲಿ ಯುವಕರಿಗೆ 4 ವರ್ಷ ತರಬೇತಿ ನೀಡಿ ದೇಶದಲ್ಲಿ ಬೆಂಕಿ ಹಾಕಿಸುವ ಕಾರ್ಯಕ್ಕೆ ಬಿಜೆಪಿ ಮುಂದಾಗಿರುವುದು ನಿಜಕ್ಕೂ ಜನ ವಿರೋಧಿ ನಿರ್ಧಾರ ಎಂದು ಕಿಡಿಕಾರಿದರು.
ಬಿಜೆಪಿ ಸರ್ಕಾರದ ಈ ನಿರ್ಧಾರದ ಹಿಂದೆ ಬಹುದೊಡ್ಡ ಹುನ್ನಾರವಿದೆ. 4 ವರ್ಷ ತರಬೇತಿ ನೀಡಿ ಶ್ರೀರಾಮಸೇನೆ, ಆರ್.ಎಸ್.ಎಸ್. ಹಾಗೂ ಭಜರಂಗದಳ ಮಾಡುವ ಮೂಲಕ ದೇಶದಲ್ಲಿ ಗಲಭೆ ಎಬ್ಬಿಸುವ ಷಡ್ಯಂತ್ರವನ್ನು ಈ ಬಿಜೆಪಿ ಮಾಡುತ್ತಿದೆ ಎಂದು ಗಂಭೀರವಾಗಿ ಆರೋಪಿಸಿದರು.
Kshetra Samachara
17/06/2022 02:08 pm