ಕಲಘಟಗಿ: ಪಶ್ಚಿಮ ಶಿಕ್ಷಕರ ಮತಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಸವರಾಜ ಹೊರಟ್ಟಿ ಅಭೂತಪೂರ್ವ ಗೆಲುವು ಸಾಧಿಸಿದ್ದರಿಂದ ಕಲಘಟಗಿ ಪಟ್ಟಣದಲ್ಲಿ ಬಿಜೆಪಿ ಕಾರ್ಯಕರ್ತರು ಪಟಾಕಿ ಸಿಡಿಸಿ ಸಂಭ್ರಮಿಸಿದರು.
ಪಟ್ಟಣದ ಆಂಜನೇಯ ವೃತ್ತದಲ್ಲಿ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ಜಮಾಯಿಸಿ ಪಕ್ಷದ ಧ್ವಜ ಹಿಡಿದು ಜೈ ಬಿಜೆಪಿ ಜೈ ಬಸವರಾಜ ಹೊರಟ್ಟಿ ಎಂದು ಘೋಷಣೆ ಮೊಳಗಿಸಿದರು.
ನಂತರ ಸಿಹಿ ಹಂಚಿ ಸಂಭ್ರಮಿಸಿದರು. ಈ ಸಂದರ್ಭದಲ್ಲಿ ಬಸವರಾಜ ಶೆರೆವಾಡ, ನಿಂಗಪ್ಪ ಸುತಗಟ್ಟಿ, ಐ.ಸಿ ಗೋಕುಲ, ಸುರೇಶ ಶೀಲವಂತರ, ಪರಶುರಾಮ ಹುಲಿಹೊಂಡ,ಶಶಿ ಹುಲಿಕಟ್ಟಿ, ಬಸವರಾಜ ಮಾದರ ಇತರರು ಇದ್ದರು.
Kshetra Samachara
15/06/2022 06:22 pm