ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನವಲಗುಂದ : ಹೊರಟ್ಟಿ ಅಭೂತ ಪೂರ್ವ ಗೆಲುವು; ಪಟಾಕಿ ಸಿಡಿಸಿ ಸಂಭ್ರಮ

ನವಲಗುಂದ : ಸೋಮವಾರ ಜೂನ್ 13 ರಂದು ಜರುಗಿದ್ದ ಪಶ್ಚಿಮ ಶಿಕ್ಷಕರ ಮತ ಕ್ಷೇತ್ರದಿಂದ ವಿಧಾನ ಪರಿಷತ್ ಚುನಾವಣೆಯ ಮತದಾನದ ಫಲಿತಾಂಶ ಬುಧವಾರ ಹೊರ ಬಿದ್ದಿದ್ದು, ಭಾರತೀಯ ಜನತಾ ಪಾರ್ಟಿ ಅಭ್ಯರ್ಥಿ ಬಸವರಾಜ ಹೊರಟ್ಟಿ ಅವರು ಅಭೂತ ಪೂರ್ವ ಗೆಲುವು ಸಾಧಿಸಿದ ಹಿನ್ನೆಲೆಯಲ್ಲಿ ನವಲಗುಂದ ನಗರದ ಗಾಂಧಿ ಮಾರುಕಟ್ಟೆಯಲ್ಲಿ ವಿಜಯೋತ್ಸವ ಆಚರಿಸಲಾಯಿತು.

ಸತತವಾಗಿ ಎಂಟನೇ ಬಾರಿ ಗೆಲುವು ಸಾಧಿಸಿ, ಇತಿಹಾಸ ನಿರ್ಮಿಸಿದ ಬಸವರಾಜ ಹೊರಟ್ಟಿ ಅವರ ಗೆಲುವಿನ ಹಿನ್ನೆಲೆ ನವಲಗುಂದ ಬಿಜೆಪಿ ಘಟಕದ ವತಿಯಿಂದ ಆಚರಿಸಲಾದ ವಿಜಯೋತ್ಸವದಲ್ಲಿ ಬಿಜೆಪಿ ಜಿಲ್ಲಾ ಗ್ರಾಮೀಣ ಅಧ್ಯಕ್ಷ ಬಸವರಾಜ ಕುಂದಗೋಳಮಠ, ಜಿಲ್ಲಾ ವಕ್ತಾರ ಗುರು ಪಾಟೀಲ್, ತಾಲೂಕಾ ಅಧ್ಯಕ್ಷ ದಾನಪ್ಪ ಗೌಡರ, ನಗರ ಘಟಕ ಅಧ್ಯಕ್ಷ ಅಣ್ಣಪ್ಪ ಬಾಗಿ, ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ಶಂಕರ ಕುಮಾರ ದೇಸಾಯಿ, ಪುರಸಭೆ ಸದಸ್ಯರು ಸೇರಿದಂತೆ ಹಲವರು ಉಪಸ್ಥಿತರಿದ್ದರು.

Edited By : PublicNext Desk
Kshetra Samachara

Kshetra Samachara

15/06/2022 04:21 pm

Cinque Terre

15.35 K

Cinque Terre

0

ಸಂಬಂಧಿತ ಸುದ್ದಿ