ಹುಬ್ಬಳ್ಳಿ: ಅದು ಒಬ್ಬರಿಗೆ ಪ್ರತಿಷ್ಠೆಯ ಚುನಾವಣೆ. ಮತ್ತೊಬ್ಬರಿಗೆ ಸೇವೆ ಮಾಡಲು ನಿರ್ಧಾರದ ಅಗ್ನಿಪರೀಕ್ಷೆ. ಈ ಅಗ್ನಿಪರೀಕ್ಷೆಯ ಮತದಾನದ ಪ್ರಕ್ರಿಯೆ ಪೂರ್ಣಗೊಂಡಿದೆ. ಅಲ್ಲದೇ ಏಳು ಜನರ ಹಣೆಬರಹ ಇಂದು ಮತ ಪೆಟ್ಟಿಗೆಯಲ್ಲಿ ಭದ್ರವಾಗಿದೆ.
ಪಶ್ಚಿಮ ಶಿಕ್ಷಕರ ಪರಿಷತ್ ಚುನಾವಣೆ ಮತದಾನ ಪ್ರಕ್ರಿಯೆ ಮುಗಿದಿದೆ. ಬೆಳಿಗ್ಗೆ ಎಂಟು ಗಂಟೆಯಿಂದ ಆರಂಭವಾದ ಮತದಾನ ಸಂಜೆ 5 ಗಂಟೆಯವರೆಗೆ ಶಾಂತಿವಾಗಿ ನಡೆಯಿತು. 7 ಅಭ್ಯರ್ಥಿಗಳ ಹಣೆಬರಹವನ್ನ ಶಿಕ್ಷಕರರು ಬರೆದಿದ್ದಾರೆ. ನಾಲ್ಕು ಜಿಲ್ಲೆಗಳ ವ್ಯಾಪ್ತಿ ಹೊಂದಿರುವ ಪಶ್ಚಿಮ ಶಿಕ್ಷಕರ ಮತಕ್ಷೇತ್ರಕ್ಕೆ ಬಿಜೆಪಿಯಿಂದ ಬಸವರಾಜ ಹೊರಟ್ಟಿ, ಕಾಂಗ್ರೆಸ್‌ನಿಂದ ಬಸವರಾಜ ಗುರಿಕಾರ, ಜೆಡಿಎಸ್‌ನ ಶ್ರೀಶೈಲ ಗಡದಿನ್ನಿ ಸೇರಿದಂತೆ ಏಳು ಜನ ಅಖಾಡದಲ್ಲಿದ್ದು, ಮಾಜಿ ಸಭಾಪತಿ ಬಸವರಾಜ ಹೊರಟ್ಟಿಗೆ ಪ್ರತಿಷ್ಠೆಯ ಚುನಾವಣೆಯಾಗಿದೆ. ಧಾರವಾಡ, ಹಾವೇರಿ, ಗದಗ, ಉತ್ತರ ಕನ್ನಡ ಜಿಲ್ಲೆಗಳನ್ನೊಳಗೊಂಡ ಪಶ್ಚಿಮ ಶಿಕ್ಷಕರ ಕ್ಷೇತ್ರದಲ್ಲಿ ನಾಲ್ಕು ಜಿಲ್ಲೆಗಳಲ್ಲಿ 76 ಮತಗಟ್ಟೆಗಳನ್ನು ಸ್ಥಾಪನೆ ಮಾಡಲಾಗಿತ್ತು. ಈ ಚುನಾವಣೆಯಲ್ಲಿ 85.69ರಷ್ಟು ಮತದಾನವಾಗಿದೆ..
ಇನ್ನೂ ನಾಲ್ಕು ಜಿಲ್ಲೆಯಲ್ಲಿ 10,983 ಪುರುಷ ಹಾಗೂ 6,990 ಮಹಿಳಾ ಮತದಾರರಿದ್ದು, ಧಾರವಾಡ -21, ಉತ್ತರ ಕನ್ನಡ-15, ಹಾವೇರಿ-26, ಗದಗ- 14 ಸೇರಿದಂತೆ ಹೆಚ್ಚುವರಿಯಾಗಿ ಒಂದು ಮತಗಟ್ಟೆ ಸ್ಥಾಪನೆ ಮಾಡಲಾಗಿತ್ತು. ಶಾಂತಿಯುತ ಮತದಾನಕ್ಕೆ ಪೊಲೀಸ್ ಬಿಗಿ ಭದ್ರತೆ ನಿಯೋಜನೆ ಮಾಡಲಾಗಿತ್ತು. 17,973 ಮತದಾರರರಲ್ಲಿ ಶೇ 85.69ರಷ್ಟು ಮತದಾರರು ತಮ್ಮ ಹಕ್ಕನ್ನು ಚಲಾವಣೆ ಮಾಡಿದ್ದು, ಏಳು ಜನರ ಅಭ್ಯರ್ಥಿಗಳ ಭವಿಷ್ಯ ಮತಪೆಟ್ಟಿಗೆಯಲ್ಲಿ ಭದ್ರವಾಗಿದೆ. ಬಹುತೇಕ ಕಡೆಯಲ್ಲಿ ಶಾಂತಿಯುತವಾಗಿ ಮತದಾನ ನಡೆದಿದ್ದು, ಹುಬ್ಬಳ್ಳಿಯ ಬಾಶಲ್ ಮಷಿನ ಶಾಲೆಯಲ್ಲಿ ಗೊಂದಲವುಂಟಾಗಿತ್ತು. ತಕ್ಷಣವೇ ಎಚ್ಚೆತ್ತುಕೊಂಡ ಚುನಾವಣಾ ಆಯೋಗ ಸಿಬ್ಬಂದಿ ಬದಲಾವಣೆ ಮಾಡಿ ಶಾಂತಿಯುತ ಮತದಾನಕ್ಕೆ ಚಾಲನೆ ನೀಡಿತು.
ಪಶ್ಚಿಮ ಶಿಕ್ಷಕರ ಕ್ಷೇತ್ರದ ಚುನಾವಣೆಯ ಮತದಾನ ಪ್ರಕ್ರಿಯೆ ಪೂರ್ಣಗೊಂಡಿದೆ. ಅಭ್ಯರ್ಥಿಗಳ ಭವಿಷ್ಯ ಇದೇ 15 ರಂದು ಹೊರಬರಲಿದೆ. ಈಗಾಗಲೇ ಸ್ಟ್ರಾಂಗ್ ರೂಮಿನಲ್ಲಿ ಜಿಲ್ಲಾಡಳಿತದ ನಿರ್ದೇಶನದ ಮೇರೆಗೆ ಎಲ್ಲವನ್ನೂ ಸ್ಥಳಾಂತರ ಮಾಡಲಾಗಿದೆ. ಯಾವ ಹೂವು ಯಾರ ಮುಡಿಗೆ ಎಂಬುವುದನ್ನು ಇನ್ನೂ ಒಂದು ದಿನ ಕಾಯಬೇಕಿದೆ.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
13/06/2022 10:40 pm